

ಉತ್ತರಕನ್ನಡ: ಮನೆಗೆ ನುಗ್ಗಿ ವಿವಾಹಿತ ಮಹಿಳೆಯನ್ನು ಅಪಹರಿಸಿರುವ ಘಟನೆ ಶಿರಸಿಯಲ್ಲಿ ನಡೆದಿದೆ. ರುತಿಕಾ ಎಂಬ ಮಹಿಳೆಯನ್ನು ನಾಲ್ವರ ತಂಡ ಕಿಡ್ನ್ಯಾಪ್ ಮಾಡಿದೆ.
ಮನೆಯಲ್ಲಿರುವಾಗಲೇ ಒಳ ನುಗ್ಗಿದ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ರುತಿಕಾಳನ್ನು ಅಪಹರಿಸಿದ್ದಾರೆ. ಶಿರಸಿಯ ಬಸವೇಶ್ವರ ನಗರದಲ್ಲಿ ಘಟನೆ ನಡೆದಿದ್ದು, ಮಹಿಳೆಯ ತಾಯಿಯೇ ಸುಪಾರಿ ನೀಡಿ ಮಗಳ ಕಿಡ್ನಾಪ್ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.
ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ಅಪಹರಣ ನಡೆದಿದೆ ಎನ್ನಲಾಗಿದೆ. ರುತಿಕಾ, ಮಣಿಕಂಠ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ಇದು ಪಾಲಕರಿಗೆ ಇಷ್ಟವಿರಲಿಲ್ಲ. ಹೀಗಾಗಿ ಪಾಲಕರೇ ಕಿಡ್ನ್ಯಾಪ್ ಮಾಡಿಸಿರುವ ಆರೋಪ ಕೇಳಿಬಂದಿದ್ದು, ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)