ಜ.22ಕ್ಕೆ ಉಟಕನೂರು ಮರಿಬಸವಲಿಂಗಸ್ವಾಮಿ ಜಾತ್ರೆ

utak
Published on

ಮಾನ್ವಿ : ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸುಕ್ಷೇತ್ರ ಉಟಕನೂರು ಶ್ರೀಅಡವಿಸಿದ್ದೇಶ್ವರ ಮಠದ ಶ್ರೀಮರಿಬಸವಲಿಂಗ ಸ್ವಾಮಿಗಳ 34ನೇ ಜಾತ್ರಾ ಮಹೋತ್ಸವವು ಬುಧವಾರ (ಜ.22) ರಂದು ನಡೆಯಲಿದೆ ಎಂದು ಶ್ರೀಮಠದ ಶ್ರೀಮರಿಬಸವರಾಜ ದೇಶೀಕೇಂದ್ರ ಸ್ವಾಮಿಗಳು ತಿಳಿಸಿದ್ದಾರೆ.

ಸುದೀರ್ಘ ಪರಂಪರೆ ಇರುವ ಉಟಕನೂರಿನ ಅಂಕಲಗಿ ಅಡವಿಸಿದ್ದೇಶ್ವರ ಮಠದ ಗುರುಪರಂಪರೆಯಲ್ಲಿ ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ತೊದಲುನುಡಿಯ ತಾತ ಶ್ರೀಮರಿಬಸಲಿಂಗ ಸ್ವಾಮಿಗಳು ಲಿಂಗೈಕ್ಯರಾಗಿ 34 ವರ್ಷಗಳು ಪೂರ್ಣಗೊಂಡಿದ್ದು, 400ಕ್ಕೂ ಹೆಚ್ಚಿನ ಅವರ ತೋರುಗದ್ದುಗೆಯ ಶಾಖಾ ಮಠಗಳು ಮೂರ್ನಾಲ್ಕು ಜಿಲ್ಲೆಯಲ್ಲಿವೆ. ಆ ಎಲ್ಲ ಮಠಗಳ ಭಕ್ತರ ಭಕ್ತಿ ಕೇಂದ್ರವಾಗಿರುವ ಉಟಕನೂರಿನಲ್ಲಿ ಪ್ರತಿವರ್ಷದಂತೆ ಜಾತ್ರಾ ಮಹೋತ್ಸವ ಅಂಗವಾಗಿ ಈಗಾಗಲೇ ಪುರಾಣ ಪ್ರವಚನ ನಡೆಯುತ್ತಿದ್ದು, ಪುಷ್ಯಮಾಸದ ಅಷ್ಠಮಿ (ಜ.22)ರಂದು ಬೆಳಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪಲ್ಲಕಿ ಮೆರವಣಿಗೆ ಹಾಗೂ ಸಂಜೆ ಬೃಹತ್ ರಥೋತ್ಸವ ನಡೆಯಲಿದೆ. ಹಾಗೂ ಜ.26ರಂದು ಪದ್ದತಿಯಂತೆ ಕಳಸ ಇಳಿಸುವ ಕಡುಬಿನ ಕಾಳಗ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net