

ಮೂಲ್ಕಿ: ಗ್ರಾಮೀಣ ವರ್ಗದ ಜನರ ಆರ್ಥಿಕ ಪುನಚ್ಚೇತನಕ್ಕಾಗಿ ಸರ್ಕಾರದ ಯೋಜನೆಗಳನ್ನು ಪಂಚಾಯಿತಿ ನೀಡುತ್ತಿದ್ದು ಅರ್ಹ ಫಲಾನುಭವಿಗಳು ಸಹಾಯ ಪಡೆಯಬೇಕು ಎಂದು ಪಡುಪಣಂಬೂರು ಪಂಚಾಯಿತಿ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್ ಹೇಳಿದರು. ಪಡುಪಣಂಬೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಕುಟುಂಬಗಳ ಅರ್ಹ ಫಲಾನುಭವಿಗಳಿಗೆ, ನಿಧಿ-1ರ ಶೇಕಡಾ 25, ಹಾಗೂ ಅಂಗವಿಕಲರ ಶೇ.5ರ ಅನುದಾನದಿಂದ ವಿದ್ಯಾರ್ಥಿ ವೇತನ, ಶವಸಂಸ್ಕಾರ ಸಹಾಯಧನ, ವೈದ್ಯಕೀಯ ವೆಚ್ಚಕ್ಕೆ ಸಹಾಯಧನ ನೀಡಲಾಯಿತು. ಪಂಚಾಯಿತಿ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್ ಚೆಕ್ ವಿತರಿಸಿದರು.
ಉಪಾಧ್ಯಕ್ಷ ಹೇಮನಾಥ ಅಮೀನ್, ಸದಸ್ಯರಾದ ಮೋಹನದಾಸ್, ವಿನೋದ್ ಎಸ್.ಸಾಲ್ಯಾನ್, ದಿನೇಶ್ ಶೆಟ್ಟಿ, ಉಮೇಶ್ ಪೂಜಾರಿ, ಅನಿಲ್ ಯಾನೆ ಸೀತಾರಾಮ, ಸಂತೋಷ್ ಅಮೀನ್, ಹರಿಪ್ರಸಾದ್, ಮಂಜುಳಾ, ಪ್ರಮೀಳಾ ಡಿ.ಶೆಟ್ಟಿ, ಪುಷ್ಪಾ ಯಾನೆ ಶ್ವೇತಾ, ವಿಜಯಲಕ್ಷ್ಮೀ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧೀರ್, ಪಂಚಾಯಿತಿ ಕಾರ್ಯದರ್ಶಿ ಸುಜಾತಾ ಎಚ್.ಉಪಸ್ಥಿತರಿದ್ದರು.