ಕೋಡಿಕಲ್ ಕೋಟಿ ಚೆನ್ನಯ ಬ್ರಿಗೇಡ್‌ನಿಂದ ಅಂಚೆ ಜನ ಸಂಪರ್ಕ ಶಿಬಿರ - ಜನರ ಆಶೋತ್ತರ ಈಡೇರಿದಾಗ ಶಿಬಿರ ಸಾರ್ಥಕ ಸಂಸದ ಕ್ಯಾ.ಬ್ರಿಜೇಶ್ ಚೌಟ

mng--22 Dec Koti chennaya
Published on

ಮಂಗಳೂರು: ಸಂಘ ಸಂಸ್ಥೆಗಳು ನಡೆಸುವ ಜನಪರ ಸೇವಾ ಕಾರ್ಯದ ಶಿಬಿರಗಳು ಅವರ ಆಶೋತ್ತರಗಳನ್ನು ಈಡೇರಿಸುವಂತಿದ್ದಾಗ ಶಿಬಿರ ಸಾರ್ಥಕವಾಗುತ್ತದೆ ಎಂದು ಸಂಸದ ಬೃಜೇಶ್ ಚೌಟ ನುಡಿದರು.

ಅವರು ಕೋಡಿಕಲ್‌ನಲ್ಲಿ ಭಾನುವಾರ ಕೋಟಿ ಚೆನ್ನಯ ಸೇವಾ ಬ್ರಿಗೇಡ್‌ನಿಂದ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಅಂಚೆ ಜನಸಂಪರ್ಕ ಅಭಿಯಾನದಡಿ ಆಧಾರ್ ನೋಂದಣಿ, ತಿದ್ದುಪಡಿ, ಅಪಘಾತ ವಿಮೆ, ಪಾಸ್‌ಪೋರ್ಟ್ ನೋಂದಾವಣೆ, ಪಾನ್ ಕಾರ್ಡ್, 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಕಾರ್ಡ್ ನೋಂದವಾಣೆ ಮತ್ತಿತರ ಜನೋಪಯೋಗಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೋಟಿ ಚೆನ್ನಯ, ಬ್ರಹ್ಮಶ್ರೆ ನಾರಾಯಣ ಗುರುಗಳು, ಡಾ.ಬಾಬಾ ಸಾಹಬ್ ಅಂಬೇಡ್ಕರ್ ಅವರು ಸಮಾಜದ ಜನರ ಒಳಿತಿಗಾಗಿ ಜೀವ ಸವೆಸಿದವರು. ಅವರ ಆದರ್ಶವನ್ನು ಕೇವಲ ಮಾತಿಗೆ ಸೀಮಿತಗೊಳಿಸದೆ ಇಂತಹ ಉತ್ತಮ ಸೇವೆಯ ಮೂಲಕ ಅವರ ಮೇಲಿರುವ ಪ್ರೀತಿ ,ಅಭಿಮಾನ ,ಗೌರವವನ್ನು ಅರ್ಪಿಸಬೇಕು. ಈ ನಿಟ್ಟಿನಲ್ಲಿ ಕಳೆದ ಮೂರು ವರ್ಷದಿಂದ ಕೋಟಿ ಚೆನ್ನಯ ಸೇವಾ ಬ್ರಿಗೇಡ್ ಮಾದರಿಯಾಗಿದೆ. ಹಿರಿಯ ನಾಗರಿಕರಿಗೆ ಪ್ರಧಾನಿ ಮೋದಿ ಅವರು ಸರ್ಕಾರದ ಮೂಲಕ ನೀಡುತ್ತಿರುವ 5 ಲಕ್ಷ ರೂ.ಗಳ ವಿಮೆಯ ಬಗ್ಗೆ ಮಾಹಿತಿಯ ಕೊರತೆಯಿದ್ದು, ಮತ್ತಷ್ಟು ಜನರಿಗೆ ಸಿಗುವಂತೆ ತಿಳಿಯಪಡಿಸಬೇಕಿದೆ ಎಂದರು.

ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಸಂಸ್ಥೆಯು ಸೇವಾ ಕಾರ್ಯದ ಮೂಲಕ ಅಶಕ್ತರಿಗೆ,ಬಡವರ್ಗಕ್ಕೆ ಸೌಲಭ್ಯವನ್ನು ಮನೆ ಬಾಗಿಲಿಗೆ ತಲುಪಿಸುತ್ತಿರುವ ಕೆಲಸವನ್ನು ಶ್ಲಾಸಿದರು.

ಮೇಯರ್ ಮನೋಜ್ ಕುಮಾರ್ ಅವರು ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಲು ಸಂಘ ಸಂಸ್ಥೆಗಳು ನೆರವಾದಾಗ ಅರ್ಹರಿಗೆ ಸದ್ಬಳಕೆಯಾಗುತ್ತದೆ ಎಂದರು. ಮಾಜಿ ಮೇಯರ್ ಕವಿತಾ ಸನಿಲ್ ಶುಭ ಹಾರೈಸಿದರು.

ಸಂಸ್ಥೆಯ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್ ಮಾತನಾಡಿ, ಬ್ರಿಗೇಡ್‌ನಿಂದ ಸ್ಥಳೀಯ ಕ್ರೆಡೆಯನ್ನು ಪುನರ್‌ಜ್ಜೀವನ ಗೊಳಿಸುವ ಜತೆಗೆ ಆರೋಗ್ಯ ಶಿಬಿರ, ಸಲಕರಣೆ ವಿತರಣೆ, ಶಿಕ್ಷಣಕ್ಕೆ ನೆರವು ಸಹಿತ ಸೇವಾ ಕಾರ್ಯ ನಡೆಸುತ್ತಾ ಬರುತ್ತಿದೆ ಎಂದರು.

ಎಸ್‌ಎನ್‌ಡಿಪಿ ಮಂದಿರದ ಅಧ್ಯಕ್ಷ ಪದ್ಮನಾಭ್ ಕಾರ್ನಾಡ್, ಸಂಚಾಲಕ ಪುರುಷೋತ್ತಮ್ ಪೂಜಾರಿ ,ಮಹಿಳಾ ಸಂಘದ ರಮಣಿ ರಮೇಶ್, ಆಂಚೆ ಇಲಾಖೆಯ ಹಿರಿಯ ಅಧಿಕಾರಿ ಸುಧಾಕರ ಮಲ್ಯ, ಉಮೇಶ್ ಮಲರಾಯನ ಸಾನ ಹಾಗೂ ಬ್ರಿಗೇಡ್‌ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ರಾಕೇಶ್ ಶೆಟ್ಟಿ ನಿರೂಪಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿಯೋಜನೆ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ತಲಾ 5 ಲಕ್ಷ ರೂಪಾಯಿಗಳ ವಿಮೆಯನ್ನು 200 ಲಾನುಭವಿಗಳಿಗೆ ಮಾಡಿಸಲಾಯಿತು. ಉಳಿದಂತೆ ಒಟ್ಟು 450 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net