ರೋಟರಿಯಿಂದ ಜನೋಪಯೋಗಿ ಕೆಲಸ

Published on

ಬಂಟ್ವಾಳ: ರೋಟರಿ ಜಿಲ್ಲೆ 3181 ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಒಳಗೊಂಡಿದ್ದು, ಉತ್ತಮ ಜನೋಪಯೋಗಿ ಕೆಲಸಗಳನ್ನು ಮಾಡಿದೆ. ಅವುಗಳ ಪೈಕಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಆರಂಭಿಸಲಾದ ಹ್ಯೂಮನ್ ಮಿಲ್ಕ್ ಬ್ಯಾಂಕ್ ಪ್ರಮುಖವಾಗಿದೆ ಎಂದು ಜಿಲ್ಲಾ ಗವರ್ನರ್ ವಿಕ್ರಮ್ ದತ್ತಾ ಹೇಳಿದರು.

ಸರ್ವೈಕಲ್ ಕ್ಯಾನ್ಸರ್ ಮಾಹಿತಿ, ಹಿರಿಯರಿಗೆ ಗಾಲಿಕುರ್ಚಿ ಸಹಿತ ಸಾಧನಗಳ ವಿತರಣೆ, ಬ್ಲಡ್, ಐ ಬ್ಯಾಂಕ್‌ಗಳು, ಚರ್ಮ ಬ್ಯಾಂಕ್ ಸಹಿತ ಹಲವು ಆರೋಗ್ಯ ಸಂಬಂಧಿ ಯೋಜನೆಗಳನ್ನು ಯಶಸ್ವಿಯಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಬಂಟ್ವಾಳ ರೋಟರಿ ಕ್ಲಬ್ ಬೇಬಿ ಕುಂದರ್ ಅಧ್ಯಕ್ಷತೆಯಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಂಟ್ವಾಳ ರೋಟರಿ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಗವರ್ನರ್ ಭೇಟಿ ವೇಳೆ ಪೊಳಲಿ ಸರ್ಕಾರಿ ಶಾಲಾ ಕೊಠಡಿಗೆ 2.5 ಲಕ್ಷ, ನರಿಕೊಂಬು ಶಾಲಾ ಅಡುಗೆ ಕೊಠಡಿ ಮೇಲ್ಛಾವಣಿಗೆ 2.5 ಲಕ್ಷ, ಧ್ವನಿವರ್ಧಕಕ್ಕೆ 3 ಲಕ್ಷ ರೂ.ನೆರವು ನೀಡಲಾಗಿದ್ದು, ಕಳೆದ 55 ವರ್ಷಗಳಲ್ಲಿ ತನ್ನದೇ ವೈಶಿಷ್ಟೃಮಯ ಚಟುವಟಿಕೆಗಳಿಂದ ಸಮಾಜಮುಖಿಯಾಗಿದೆ ಎಂದರು.

ರೋಟರಿ ಸಹಾಯಕ ಗವರ್ನರ್ ಮಹಮ್ಮದ್ ವಳವೂರು, ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗಾ, ಜೋನಲ್ ಲೆಫ್ಟಿನೆಂಟ್ ಪುಷ್ಪರಾಜ್ ಹೆಗ್ಡೆ, ರೋಟರಿ ಬಂಟ್ವಾಳ ಜತೆ ಕಾರ್ಯದರ್ಶಿ ವೀರೇಂದ್ರ ಅಮೀನ್ ಹಾಗೂ ಪೂರ್ವಾಧ್ಯಕ್ಷ ಕೆ.ನಾರಾಯಣ ಹೆಗ್ಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net