ರಾವಂದೂರು: ಸತತ ಪರಿಶ್ರಮವಿದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ನಿವೃತ್ತ ಯೋಧ ಶಿವು ತಿಳಿಸಿದರು.
ಕಿತ್ತೂರು ಗ್ರಾಮದಲ್ಲಿ ಶಿವು ಸೈನಿಕ ಅಕಾಡೆಮಿ ವತಿಯಿಂದ ಯುವಕರಿಗೆ ಹಮ್ಮಿಕೊಂಡಿದ್ದ ಉದ್ಯೋಗ ಕುರಿತ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಕರು ಸಮಯವನ್ನು ಅನ್ಯ ಕೆಲಸಗಳಲ್ಲಿ ವ್ಯರ್ಥ ಮಾಡದೆ ತಮ್ಮ ಬದುಕನ್ನು ರೂಪಿಸುವ ಕಡೆ ಹೆಚ್ಚು ಗಮನಹರಿಸಬೇಕು. ಆಗ ಮಾತ್ರ ತಮ್ಮ ಬದುಕು ಉತ್ತಮವಾಗಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಸಲುವಾಗಿ ಉಚಿತ ತರಬೇತಿ ನೀಡಲಾಗುತ್ತಿದೆ. ಪೊಲೀಸ್ ಮತ್ತು ಸೇನೆಗೆ ಸೇರುವಂತ ಯುವಕರು ತರಬೇತಿಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.