ನೀರನ್ನು ಮಿತವಾಗಿ ಬಳಕೆ ಮಾಡಿ

30ark4
ಅರಕಲಗೂಡು ತಾಲೂಕಿನ ಗಂಗನಾಳು ಏತನೀರಾವರಿ ಯೋಜನೆಯ ಎರಡನೇ ಹಂತದ ನೀರುಹರಿಸುವ ಕಾರ್ಯಕ್ಕೆ ಶಾಸಕ ಎ. ಮಂಜು ಶನಿವಾರ ಚಾಲನೆ ನೀಡಿದರು. ಗೋಕುಲ್, ರಮೇಶ್, ಶ್ರೀನಿವಾಸ್ ಇತರರಿದ್ದರು.
Published on

ಅರಕಲಗೂಡು: ತಾಲೂಕಿನ ಗಂಗನಾಳು ಏತನೀರಾವರಿ ಯೋಜನೆಯ ಎರಡನೇ ಹಂತದ ನೀರುಹರಿಸುವ ಕಾರ್ಯಕ್ಕೆ ಶಾಸಕ ಎ.ಮಂಜು ಶನಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಎರಡನೇ ಹಂತದಲ್ಲಿ 40 ಕೆರೆಗಳನ್ನು ತುಂಬಿಸಲಾಗುವುದು. ಇದರಿಂದ ಜನ, ಜಾನುವಾರುಗಳ ನೀರಿನ ಸಮಸ್ಯೆ ದೂರಾಗಿ, ಅಂತರ್ಜಲ ವೃದ್ಧಿಸಲು ಸಹಾಯಕವಾಗಲಿದೆ. ಗಂಗನಾಳು ಯೋಜನೆ ನನ್ನ ಕನಸಿನ ಕೂಸು. ಇದರ ಅನುಷ್ಠಾನದಿಂದ ಕಸಬಾ ಮತ್ತು ದೊಡ್ಡಮಗ್ಗೆ ಹೊಬಳಿಗಳ ಕೃಷಿಕರಿಗೆ ನೆರವಾಗಲಿದೆ. ಬರಗಾಲದ ಈ ದಿನಗಳಲ್ಲಿ ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳುವತ್ತ ರೈತರು ಗಮನಹರಿಸಬೇಕು. ಈ ಯೋಜನೆ ವ್ಯಾಪ್ತಿಯಲ್ಲಿ ಬರುವ ಹಲವು ಕಟ್ಟೆಗಳಿಗೆ ಪೈಪ್‌ಲೈನ್ ಅಳವಡಿಕೆಯಾಗಿಲ್ಲ. ಕೊಳವೆಗಳನ್ನು ಅಳವಡಿಸಿ ಕಟ್ಟೆಗಳನ್ನು ತುಂಬಿಸಲು ಕ್ರಮಕೈಗೊಳ್ಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬೈಚನಹಳ್ಳಿ ಗ್ರಾಪಂ ಅಧ್ಯಕ್ಷೆ ಆಶಾ, ಮಾಜಿ ಅಧ್ಯಕ್ಷ ದೇವರಾಜೇಗೌಡ, ಮುಖಂಡ ಮುದ್ದನಹಳ್ಳಿ ರಮೇಶ್, ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಗೋಕುಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net