

ಸುಳ್ಯ: ಕೃಷಿ ಇಲಾಖೆ ವತಿಯಿಂದ ರೈತರಿಗೆ ಕೃಷಿ ಉಪಕರಣ ಮತ್ತು ಸವಲತ್ತು ವಿತರಣೆ ಕೃಷಿ ಇಲಾಖೆಯಲ್ಲಿ ಮಂಗಳವಾರ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರಿಗೆ ಕೇಂದ್ರ ಸರ್ಕಾರದ ಹಲವಾರು ಯೋಜನೆ ಜಾರಿಗೆ ತಂದಿದ್ದು ರೈತರು ಸಮರ್ಪಕವಾಗಿ ಬಳಸಿ ಹೆಚ್ಚಿನ ಆದಾಯ ಪಡೆಯುವಂತಾಗಬೇಕು ಎಂದರು.
ಆಕಸ್ಮಿಕವಾಗಿ ಮರಣ ಹೊಂದಿದ ಕೃಷಿಕರ ಕುಟುಂಬಕ್ಕೆ ಎರಡು ಲಕ್ಷ ರೂ. ಪರಿಹಾರ ವಿತರಣೆ, 23 ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣ, 35 ಫಲಾನುಭವಿಗಳಿಗೆ ತುಂತುರು ನೀರಾವರಿ ಟಕ ಯಂತ್ರಗಳ ವಿತರಣೆ, 10 ಫಲಾನುಭಾವಿಗಳಿಗೆ ಟಾರ್ಪಾಲ್ ವಿತರಣೆ ನಡೆಯಿತು.
ಪುತ್ತೂರು ಉಪ ಕೃಷಿ ನಿರ್ದೇಶಕ ಶಿವಶಂಕರ, ಉಪಕೃಷಿ ಸಹಾಯಕ ಅಧಿಕಾರಿ ಗುರುಪ್ರಸಾದ್, ಫಲಾನುಭವಿಗಳು ಉಪಸ್ಥಿತರಿದ್ದರು.