ಸುಸ್ಥಿರ ಕೃಷಿಗೆ ಜೈವಿಕ ಗೊಬ್ಬರ ಬಳಸಿ

agri
Published on

ರೈತರಿಗೆ ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸಲಹೆ

ಚಿಂತಾಮಣಿ: ಬೆಳೆಗಳಿಗೆ ಜೈವಿಕ ಗೊಬ್ಬರಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಷ್​, ಸುಣ್ಣ, ಮೆಗ್ನೀಷಿಯಂ, ಗಂಧಕ, ಸತು, ಕಬ್ಬಿಣ, ತಾಮ್ರ, ಮ್ಯಾಂಗನೀಸ್​, ಬೋರಾನ್​, ಮಾಲಿಬ್ಡಿನಂ ಮತ್ತು ಕ್ಲೋರಿನ್​ಗಳು ಅಗತ್ಯಕ್ಕೆ ತಕ್ಕಂತೆ ಒದಗಿಸುವುದರಿಂದ ಗುಣಮಟ್ಟ ಹಾಗೂ ಅಧಿಕ ಇಳುವರಿ ಪಡೆಯಬಹುದು ಎಂದು ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ.

ಜಿಲ್ಲೆಯ ಕಮ್ಮಗುಟ್ಟಹಳ್ಳಿ, ಚಿಕ್ಕತಮ್ಮಲಹಳ್ಳಿ ಹಾಗೂ ವಿವಿಧ ಗ್ರಾಮಗಳಲ್ಲಿ ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಹಮ್ಮಿಕೊಂಡಿದ್ದ ಕೃಷಿಯಲ್ಲಿ ಜೈವಿಕ ಗೊಬ್ಬರದ ಬಳಕೆಯ ಕುರಿತು ಪ್ರಾತ್ಯಕೆಯಲ್ಲಿ ಮಣ್ಣು ವಿಜ್ಞಾನಿ ಡಾ.ಕೆ.ಸಂಧ್ಯಾ ಮಾತನಾಡಿ, ಸೂ್ಮಾಣು ಜೀವಿಗಳಿಂದ ತಯಾರಿಸಲ್ಪಡುವ ಜೈವಿಕ ಗೊಬ್ಬರ ಸಸ್ಯ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಷ್​ ಮತ್ತು ಇತರ ಲು ಪೋಷಕಾಂಶಗಳನ್ನು ಗಿಡಕ್ಕೆ ಒದಗಿಸುವಲ್ಲಿ ಸಹಾಯಕವಾಗಿದೆ.

ಇವುಗಳಲ್ಲಿ ಪ್ರಮುಖವಾದವು ಸಾರಜನಕ ಸ್ಥೀರಿಕರಿಸುವ ಜೈವಿಕ ಗೊಬ್ಬರ, ರಂಜಕ ಕರಗಿಸುವ ಜೈವಿಕ ಗೊಬ್ಬರ, ಸಾವಯವ ಪದಾರ್ಥಗಳನ್ನು ಕೊಳೆಸುವ ಜೈವಿಕ ಗೊಬ್ಬರ. ಕೃಷಿಗೆ ಉಪಯುಕ್ತವಾದ ಸೂ್ಮಾಣು ಜೀವಿಗಳಿಂದ ಕೂಡಿದ ಜೈವಿಕ ಗೊಬ್ಬರಗಳನ್ನು ಯಾವುದೇ ಕಾರಣಕ್ಕೂ ರಾಸಾಯನಿಕ ರಸ ಗೊಬ್ಬರಗಳು ಹಾಗೂ ಕ್ರಿಮಿ ಕೀಟನಾಶಕಗಳೊಂದಿಗೆ ಮಿಶ್ರಣ ಮಾಡದೆ ನೇರವಾಗಿ ಬಳಸಬೇಕು ಎಂದು ತಿಳಿಸಿದರು.

ರಾಸಾಯನಿಕ ಗೊಬ್ಬರದಿಂದ ಮಾಲಿನ್

ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳ ಅತೀವ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಂಠಿತವಾಗಿ ಇಳುವರಿಮಟ್ಟ ಕಡಿಮೆಯಾಗುತ್ತಿದೆ. ರಾಸಾಯನಿಕ ಗೊಬ್ಬರಗಳ ಬೆಲೆ ಹೆಚ್ಚುವುದರ ಜತೆಗೆ ಅವುಗಳ ಬಳಕೆಯಿಂದ ಪರಿಸರ ಮಾಲಿನ್ಯವೂ ಉಂಟಾಗುತ್ತಿದೆ. ಹಾಗಾಗಿ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಸಾವಯವ ಮತ್ತು ಜೈವಿಕ ಗೊಬ್ಬರ ಬಳಸುವುದು ಅವಶ್ಯವಾಗಿದೆ ಎಂದು ಕೃಷಿ ವಿಜ್ಞಾನಿಗಳು ತಿಳಿಸಿದರು.

ಬೀಜೋಪಚಾರ ಅಗತ್ಯ

ರೈಜೋಬಿಯಂ, ಅಜೋಸ್ಪಿರಿಲ್ಲಂ, ಅಜಟೋಬ್ಯಾಕ್ಟರ್​ ಮತ್ತು ರಂಜಕ ಕರಗಿಸುವ ಜೈವಿಕ ಗೊಬ್ಬರಗಳನ್ನು ಬೀಜಗಳಿಗೆ ಬಳಸುವುದರಿಂದ, ಸಾವಯವ ಗೊಬ್ಬರದ ಜತೆಗೆ ಮಣ್ಣಿಗೆ ಹಾಕುವುದರಿಂದ ಅಥವಾ ಸಸ್ಯಗಳ ಬೇರುಗಳಿಗೆ ಬಳಸುವ ಮೂಲಕ ಉಪಯೋಗಿಸಬಹುದು. ಒಂದು ಲೀಟರ್​ ನೀರಿಗೆ 150 ಗ್ರಾಂ. ಬೆಲ್ಲ ಅಥವಾ ಸಕ್ಕರೆ ಹಾಕಿ 5ರಿಂದ 10 ನಿಮಿಷ ಕುದಿಸಿ ಅಂಟು ದ್ರಾವಣ ತಯಾರಿಸಬೇಕು. 10 ಕೆಜಿ ಬೀಜಕ್ಕೆ 250 ಮಿ.ಲೀ. ದ್ರಾವಣ ಸಾಕು. ದ್ರಾವಣ ಪೂರ್ತಿ ತಣ್ಣಗಾದ ಮೇಲೆ ಒಂದು ಪಾಕೇಟ್​ ಜೈವಿಕ ಗೊಬ್ಬರ ಹಾಕಿ ಸರಿಯಾಗಿ ಕಲಿಸಿ ಎಕರೆಗೆ ಬೇಕಾಗುವ ಬೀಜಗಳಿಗೆ ಸಮವಾಗಿ ಲೇಪನವಾಗುವಂತೆ ಮಾಡಿ 15 ನಿಮಿಷ ನೆರಳಿನಲ್ಲಿ ಒಣಗಿಸಿ ಕೂಡಲೇ ಬಿತ್ತನೆ ಮಾಡಬೇಕು ಎಂದು ಕೃಷಿ ವಿಜ್ಞಾನಿಗಳು ತಿಳಿಸಿದರು.

ನೇರವಾಗಿ ಮಣ್ಣಿಗೆ ಹಾಕುವ ವಿಧಾನ

1 ಕೆಜಿ ಜೈವಿಕ ಗೊಬ್ಬರವನ್ನು 100 ಕೆಜಿ ಕೊಟ್ಟಿಗೆ ಗೊಬ್ಬರದ ಜತೆ ಮಿಶ್ರಣ ಮಾಡಿ 15ರಿಂದ 20 ದಿನಗಳವರೆಗೂ ನೆರಳಿನಲ್ಲಿಟ್ಟು ನಂತರ ಬಿತ್ತನೆ ಸಾಲುಗಳಲ್ಲಿ ಹಾಕುವುದು ಅಥವಾ 1 ಕೆಜಿ ಜೈವಿಕ ಗೊಬ್ಬರವನ್ನು 20 ಕೆಜಿ ಕೊಟ್ಟಿಗೆ ಗೊಬ್ಬರದ ಜತೆ ಮಿಶ್ರಣ ಮಾಡಿ ನಂತರ ಬಿತ್ತನೆ ಸಾಲುಗಳಲ್ಲಿ ಹಾಕುವಂತೆ ವಿಜ್ಞಾನಿಗಳು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net