ಬೆಂಗಳೂರು: ಅಮೆರಿಕದಲ್ಲಿ ಉನ್ನತ ಶಿಕ್ಷಣ ಕುರಿತು ಮಾಹಿತಿ ನೀಡುವ ಅಧಿಕೃತ ಮೂಲವಾದ ಎಜುಕೇಶನ್ ಯುಎಸ್ಎ ಭಾರತದ ಎಂಟು ಕಡೆಗಳಲ್ಲಿ "ಯುಎಸ್ನಲ್ಲಿ ಅಧ್ಯಯನ' ಶಿಕ್ಷಣ ಮೇಳವನ್ನು ಆಯೋಜಿಸಲಾಯಿತು. ಈ ಮೇಳಗಳು ಆ.9 ರಂದು ಚೆನ್ನೆ$ಯಲ್ಲಿ ಆರಂಭವಾಗಿ ಆ.17ರಂದು ಪುಣೆಯಲ್ಲಿ ಕೊನೆಗೊಂಡಿದೆ. ದೇಶಾದ್ಯಂತ ನಡೆದ ಈ ಮೇಳದಲ್ಲಿ ಮಾನ್ಯತೆ ಪಡೆದ 50ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಭಾಗವಹಿಸಿತ್ತು. ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಅಮೆರಿಕನ್ ಸಂಸ್ಥೆಗಳ ಅಧಿಕೃತ ಪ್ರತಿನಿಧಿಗಳನ್ನು ಭೇಟಿಯಾಗುವ ಅವಕಾಶ ದೊರಕಿದೆ.
ಈ ಮೇಳಗಳು ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಬಯಸುವ ಪದವಿ, ಸ್ನಾತಕೋತ್ತರ ಅಥವಾ ಪಿಎಚ್ಡಿ ವಿದ್ಯಾರ್ಥಿಗಳಿಗೆ ತಮ್ಮದೇ ಶಿಕ್ಷಣ ಮಾರ್ಗವನ್ನು ರೂಪಿಸಿಕೊಳ್ಳಲು ನೇರ ಸಲಹೆ ಮತ್ತು ಮಾರ್ಗದರ್ಶನ ಪಡೆಯುವ ಅವಕಾಶ ಒದಗಿಸಿದೆ. ವಿಶ್ವವಿದ್ಯಾಲಯದ ಅಧಿಕಾರಿಗಳು, ಎಜುಕೇಶನ್ ಯುಎಸ್ಎ ಸಲಹೆಗಾರರು ಮತ್ತು ಅಮೇರಿಕ ರಾಯಭಾರ ಕಚೇರಿಯ ಪ್ರತಿನಿಧಿಗಳೊಂದಿಗೆ ನೇರವಾಗಿ ಸಂವಾದ ನಡೆಸುವ ಮೂಲಕ, ವಿಶ್ವಾಸಾರ್ಹ ಮತ್ತು ಪಾರದರ್ಶಕ ಮಾಹಿತಿಯನ್ನು ಪಡೆದರು. ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಆಸಕ್ತಿ ಇರುವ ಭಾರತೀಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದೇ ಮೇಳದ ಉದ್ದೇಶವಾಗಿತ್ತು.