ದಕ್ಷಿಣ ಭಾರತದ ದರ್ಗಾಗಳಿಂದ ಶೈಕ್ಷಣಿಕ ಕ್ರಾಂತಿ : ಅಹ್ಮದ್ ಸಖಾಫಿ ಅಭಿಪ್ರಾಯ

16
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಕಾರಣಿಕ ಪುರುಷರ ದರ್ಗಾಗಳು ಉತ್ತರ ಭಾರತದಲ್ಲಿಲ್ಲದ ಕಾರಣ ಶೈಕ್ಷಣಿಕ ಕೇಂದ್ರಗಳ ಕೊರತೆಯಿದೆ. ಆದರೆ ದಕ್ಷಿಣ ಭಾಗದಲ್ಲಿ ಅದೆಷ್ಟೋ ಮಂದಿ ಸುಶಿಕ್ಷಿತರಾಗಲು ಇಲ್ಲಿರುವ ದರ್ಗಾಗಳಿಂದಾದ ಶೈಕ್ಷಣಿಕ ಕ್ರಾಂತಿ ಕಾರಣ ಎಂದು ಮೂಡುಬಿದಿರೆ ಅಲ್ ಮುಫಾಝ್ ಸಂಸ್ಥೆಯ ಪ್ರಾಂಶುಪಾಲ ಅಹ್ಮದ್ ಸಖಾಫಿ ಕಾಶಿಪಟ್ನ ಹೇಳಿದರು.

ಉಳ್ಳಾಲ ದರ್ಗಾದ 22ನೇ ಪಂಚವಾರ್ಷಿಕ ಉರುಸ್ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ‘ಮಖ್ಬರಗಳು ಅನುಗ್ರಹ ಕೇಂದ್ರಗಳು’ ಎನ್ನುವ ವಿಷಯದಲ್ಲಿ ಮಾತನಾಡಿದರು.

ಸರಳೀಕಟ್ಟೆ ಮಸೀದಿಯ ಮುದರ್ರಿಸ್ ಅಬ್ಬಾಸ್ ಉಸ್ತಾದ್ ದುವಾ ನೆರವೇರಿಸಿದರು. ಆಲವಿ ಸಖಾಫಿ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಿದರು. ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಮಿಲ್ಲತ್ ನಗರ ಮದ್ರಸದ ಸಂಶುದ್ದೀನ್ ಮದನಿ ಉಸ್ತಾದ್, ಕೇಂದ್ರ ಜುಮಾ ಮಸೀದಿಯ ಖತೀಬ್ ಹಾಫಿಲ್ ಅಬ್ದುಲ್ ಮಜೀದ್ ಫಾಳಿಲಿ ಅಲ್ ಹಿಕಮಿ ಉಸ್ತಾದ್, ಉಳ್ಳಾಲ ಬೈಲ್ ಮಸೀದಿಯ ಖತೀಬ್ ಕಬೀರ್ ಸಅದಿ, ಅಧ್ಯಕ್ಷ ಅಮೀರ್ ಅಲಿ, ಕಾರ್ಯದರ್ಶಿ ಬಶೀರ್, ಕೋಶಾಧಿಕಾರಿ ಅಬ್ದುಲ್ ಅಝೀಝ್, ಸದರ್ ಉಸ್ತಾದ್ ಸಂಶುದ್ದೀನ್ ಮದನಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಕೋಶಾಧಿಕಾರಿ ನಾಝೀಮ್ ರಹ್ಮಾನ್ ಮುಕಚ್ಚೇರಿ, ಕಾರ್ಯದರ್ಶಿ ಮುಸ್ತಫಾ ಇಸ್ಹಾಕ್, ಇಬ್ರಾಹಿಂ, ದರ್ಗಾ ಸದಸ್ಯರಾದ ಖಲೀಲ್, ಆರಿಫ್ ಯು, ಮೊಯಿದ್ದೀನ್ ಪಟ್ಲ, ಚಾರಿಟೆಬಲ್ ಟ್ರಸ್ಟ್ ಸದಸ್ಯರಾದ ಮುಹಮ್ಮದ್, ಮೊಯಿದ್ದೀನ್ ಯು.ಬಿ, ಪಿಲಾರ್ ಮಸೀದಿಯ ಅಧ್ಯಕ್ಷ ಪಿ.ಸಿ.ಇಮ್ತಿಯಾಝ್, ಕಾರ್ಯದರ್ಶಿ ನಾಸಿರ್, ಖತೀಬ್ ಜಬ್ಬಾರ್ ಸಖಾಫಿ, ಪಟ್ಲ ಮಸೀದಿಯ ಅಧ್ಯಕ್ಷ ಪಿ.ಎಚ್.ಮಹಮ್ಮದ್, ಕಾರ್ಯದರ್ಶಿ ತೌಸೀಫ್, ಕೋಶಾಧಿಕಾರಿ ಹಾರಿಸ್ ಬಿ, ಸದರ್ ಮುನೀರ್ ಲತೀಫ್, ಅರೆಬಿಕ್ ಕಾಲೇಜು ಪ್ರೊಫೆಸರ್‌ಗಳಾದ ಇಬ್ರಾಹಿಂ ಅಹ್ಸನಿ, ರಹ್ಮಾನ್ ನೂರಾನಿ, ನಜೀಬ್ ನೂರಾನಿ, ತಸ್ಲೀಂ ನೂರಾನಿ ಮೊದಲಾದವರು ಉಪಸ್ಥಿತರಿದ್ದರು. ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.

ಒಂದು ಕಾಲದಲ್ಲಿ ಉಳ್ಳಾಲ ಭಾಗದಲ್ಲಿ ಮುಸ್ಲಿಮರು ಮರಣ ಹೊಂದಿದರೆ ಅಂತ್ಯಸಂಸ್ಕಾರ ವಿಧಿವಿಧಾನ ನೆರವೇರಿಸಲು ತಜ್ಞರ ಕೊರತೆಯಿತ್ತು. ಧಾರ್ಮಿಕ ಪ್ರವಚನಕ್ಕಾಗಿ ಕೇರಳದ ಧರ್ಮಗುರುಗಳನ್ನು ಆಶ್ರಯಿಸಬೇಕಿತ್ತು. ಆದರೆ ಉಳ್ಳಾಲಕ್ಕೆ ತಾಜುಲ್ ಉಲಮಾ ಆಗಮಿಸಿದ ಬಳಿಕ ಇಲ್ಲಿನ ಚಿತ್ರಣವೇ ಬದಲಾಯಿತು. ಅಹ್ಮದ್ ಸಖಾಫಿ ಕಾಶಿಪಟ್ನ ಮೂಡುಬಿದಿರೆ ಅಲ್ ಮುಫಾಝ್ ಸಂಸ್ಥೆಯ ಪ್ರಾಂಶುಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net