ಅರ್ಬನ್ ಬ್ಯಾಂಕ್ ನೂತನ ಶಾಖೆ ಆರಂಭಕ್ಕೆ ಆದ್ಯತೆ

20 Aln 1- urban Bank
Published on

ಅಳ್ನಾವರ: ಮೊಬೈಲ್ ಬ್ಯಾಂಕಿಂಗ್ ಹಾಗೂ ಜನರ ಅನುಕೂಲತೆಗಾಗಿ ನೂತನ ಶಾಖೆ ತೆರೆಯಲು ಆದ್ಯತೆ ನೀಡಲಾಗುವುದು ಎಂದು ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ತೇಗೂರ ಹೇಳಿದರು.


ಇತ್ತೀಚೆಗೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ 66ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.


ಹಲವು ಸವಾಲುಗಳನ್ನು ಎದುರಿಸುತ್ತ ಹಾಗೂ ರಿಸರ್ವ ಬ್ಯಾಂಕ್​ನ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಸದಸ್ಯರು, ಗ್ರಾಹಕರ ಸಹಕಾರದಿಂದ ಬ್ಯಾಂಕ್​ನ ವಹಿವಾಟು ಅತ್ಯುತ್ತಮ ಹಾಗೂ ಪ್ರಗತಿ ಪಥದಲ್ಲಿ ಸಾಗುತ್ತಿದೆ. 4770 ಸದಸ್ಯರ 2. 32 ಕೋಟಿ ರೂ. ಷೇರು ಬಂಡವಾಳ, 69.20 ಕೋಟಿ ರೂ. ಠೇವು, 80.59 ಕೋಟಿ ರೂ. ದುಡಿಯುವ ಬಂಡವಾಳದ ಜತೆಯಲ್ಲಿ 439. 84 ಕೋಟಿ ರೂ. ವ್ಯವಹಾರ ನಡೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ 1 ಕೋಟಿ ಲಾಭದೊಂದಿಗೆ ಷೇರುದಾರರಿಗೆ ಶೇ. 15 ಲಾಭ ವಿತರಿಸಲಾಗುವುದು ಎಂದರು.


ಶಾಲಾ- ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೋ›ತ್ಸಾಹಧನದೊಂದಿಗೆ ಸತ್ಕರಿಸಲಾಯಿತು. ಉಪಾಧ್ಯಕ್ಷ ರೂಪೇಶ ಗುಂದಕಲ. ಎಸ್.ಜಿ. ಜಕಾತಿ. ಸಿ.ಕೆ. ಪೊಕಾರ, ಮಧು ಬಡಸ್ಕರ. ಎಸ್.ಎಸ್. ಅಂಬಡಗಟ್ಟಿ. ಎ.ವಿ. ಉಡುಪಿ. ಜೆ.ಆರ್. ತೊಲಗಿ, ರಾಜು ಅಷ್ಟೇಕರ. ಎಂ.ಆರ್. ಗಾಣಿಗೇರ, ಎನ್.ಪಿ. ಹಂಜಗಿ. ಎಫ್.ಎಸ್. ಮೇದಾರ. ಪಿ.ಎಸ್. ಹೊಸಕೇರಿ. ಯು.ಎನ್. ಗಡಕರ. ವರ್ಷಾ ತೆಗೂರ. ಎ.ಎಸ್. ಹಿರೇಮಠ. ಪಿ.ಜಿ. ಮಟ್ಟಿ ಇದ್ದರು. ಸಿಇಒ ರವಿ ಪಟ್ಟಣ, ಸಂಜಯ ಕೌಜಲಗಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net