ಸಿನಿಮಾ ಪ್ರದರ್ಶನ ರದ್ದಾಗಿದ್ದಕ್ಕೆ ಗಲಾಟೆ

Published on

ಚಿಂತಾಮಣಿ: ನಗರದ ಆದರ್ಶ ಚಲನ ಚಿತ್ರಮಂದಿರದಲ್ಲಿ ನಟ ಪವರ್​ ಸ್ಟಾರ್​ ಪವನ್​ ಕಲ್ಯಾಣ ಅಭಿನಯದ ಓಜಿ ಚಲನಚಿತ್ರ ಪ್ರದರ್ಶನ ರದ್ದುಪಡಿಸಿದ್ದನ್ನು ಖಂಡಿಸಿ ಅಭಿಮಾನಿಗಳು ಗಲಾಟೆ ಮಾಡಿದ್ದಾರೆ.

ನೆಚ್ಚಿನ ನಟನ ಸಿನಿಮಾ ನೋಡಲು ಟಿಕೆಟ್​ ಖರೀದಿಸಿದ್ದ ಅಭಿಮಾನಿಗಳು ಮಂದಿರದಲ್ಲಿ ಚಿತ್ರ ಪ್ರದರ್ಶನಕ್ಕೆ ಕಾದು ಕುಳಿತಿದ್ದರು. ಆದರೆ, 2&3ಗಂಟೆ ಕಾದರೂ ಚಿತ್ರ ಪ್ರದರ್ಶನವಾಗಿಲ್ಲ. ಬಳಿಕ ಪ್ರದರ್ಶನ ರದ್ದಾಗಿರುವ ಬಗ್ಗೆ ಮಾಹಿತಿ ತಿಳಿದು ಕುಪಿತಗೊಂಡ ಅಭಿಮಾನಿಗಳು, ಚಿತ್ರಮಂದಿರದ ಪರದೆ ಹರಿದು,

ಸಿಸಿ ಕ್ಯಾಮರಾ, ಪೀಠೋಪಕರಣಗಳು, ಸೀಲಿಂಗ್​ ಪ್ಯಾನ್​ ಮತ್ತಿತರ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.

ವಿಷಯ ತಿಳಿದು ಚಿಂತಾಮಣಿ ನಗರಠಾಣೆ ಪೊಲೀಸ್​ ಇನ್​ಸ್ಪೆಕ್ಟರ್​ ವಿಜಿಕುಮಾರ್​ ಮತ್ತು ದಿಬ್ಬೂರಹಳ್ಳಿ ಪಿಎಸ್​ಐ ಶ್ಯಾಮಲಾ ಮತ್ತಿತರ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ಅಭಿಮಾನಿಗಳನ್ನು ಸಮಾಧಾನಪಡಿಸಿದರು. ಅಭಿಮಾನಿಗಳಿಗೆ ಟಿಕೆಟ್​ ವಾಪಸ್​ ನೀಡಿದಲ್ಲದೆ ಟಿಕೆಟ್​ ಹಣ ಮರು ಪಾವತಿ ಮಾಡುವುದಾಗಿ ಹೇಳಿ ಅಭಿಮಾನಿಗಳನ್ನು ಸಿಬ್ಬಂದಿ ಹೊರಕ್ಕೆ ಕಳುಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net