

ಬೈಂದೂರು: ಉಪ್ಪುಂದ ಅಪ್ಪಟ ಗ್ರಾಮೀಣ ಸೊಗಡಿನ ಹಿರಿಮೆ ಇರುವ ಗ್ರಾಮವಾಗಿದ್ದು, ಕೃಷಿ ಹಾಗೂ ಮೀನುಗಾರಿಕೆ ಇಲ್ಲಿನವರ ಮುಖ್ಯ ಕುಲಕಸುಬು. ಅಕ್ಕಪಕ್ಕದ ಗ್ರಾಮಗಳಿಗಿಂತ ಉತ್ತಮ ಮಟ್ಟದಲ್ಲಿ ಅಭಿವೃದ್ಧಿಯಾಗಿದೆ. ಇಲ್ಲಿನ ಗ್ರಾಮ ಪಂಚಾಯಿತಿ, ವಿವಿಧ ಇಲಾಖೆಗಳ ಯೋಜನೆ ಅನುಷ್ಠಾನ ಮೂಲಕ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಹಿಂದಿನಿಂದಲೂ ಗುರುತಿಸಿಕೊಂಡಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಉಪ್ಪುಂದ ಗ್ರಾಮ ಪಂಚಾಯಿತಿಯ ನೂತನ ಕಚೇರಿ ಸೋಮವಾರ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಮೋಹನಚಂದ್ರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ, ವಿಧಾನಪರಿಷತ್ ಸದಸ್ಯ ಕಿಶೋರ್ಕುಮಾರ್ ಪುತ್ತೂರು, ಬೈಂದೂರು ತಾಪಂ ಇಒ ರವಿಕುಮಾರ್ ಹುಕ್ಕೇರಿ, ಗ್ರಾಪಂ ಮಾರ್ಗದರ್ಶಿ ಅಧಿಕಾರಿ ನಾಗೇಶ ಕೆ. ನಾಯ್ಕ, ಗ್ರಾಪಂ ಸದಸ್ಯರಾದ ಸುಮಿತ್ರಾ ಗಾಣಿಗ, ರೇಷ್ಮಾ ಎಸ್.ಭಟ್, ಬಾಬು ದೇವಾಡಿಗ, ಶ್ರೀನಿವಾಸ, ವೀರಭದ್ರ, ದಿವಾಕರ ಶೆಟ್ಟಿ, ಸುಶೀಲಾ, ವೀಣಾ ಪೂಜಾರಿ, ಪ್ರೇಮಾ ದೇವಾಡಿಗ, ಮಂಜುನಾಥ ದೇವಾಡಿಗ, ನಾಗರಾಜ ಶೇಟ್, ಲಕ್ಷ್ಮೀ, ಶ್ರೀಧರ, ಪೂರ್ಣಿಮಾ ನಾಗರಾಜ ಖಾರ್ವಿ, ಸುಪ್ರೀತಾ, ದುರ್ಗಮ್ಮ, ಗಿರಿಜಾ, ಮುರಳೀಧರ, ವಿನೋದರಾಜ್, ಶೇಖರ ಪೂಜಾರಿ, ಪ್ರಕಾಶ ಆಚಾರ್, ಮಂಜಮ್ಮ, ಸುಪ್ರೀತಾ ಶೆಟ್ಟಿ, ಗಿರಿಜಾ ಇದ್ದರು. ಗ್ರಾಪಂ ಸದಸ್ಯ ಜಗನ್ನಾಥ ಉಪ್ಪುಂದ ಪ್ರಸ್ತಾವಿಸಿದರು. ಪಿಡಿಒ ಸುದರ್ಶನ್ ಎಸ್. ಸ್ವಾಗತಿಸಿ, ಕಾರ್ಯದರ್ಶಿ ಗಿರಿಜಾ ವಂದಿಸಿದರು. ರೇಖಾ ನಿರೂಪಿಸಿದರು.