

ಉಪ್ಪಿನಂಗಡಿ: ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘ 2024-25ನೇ ಸಾಲಿನಲ್ಲಿ 572 ಕೋಟಿ ರೂ. ವ್ಯವಹಾರ ನಡೆಸಿ 3.70 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಶೇ.16 ಡಿವಿಡೆಂಡ್ ನೀಡಲಾಗುವುದೆಂದು ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ಘೋಷಿಸಿದರು.
ಭಾನುವಾರ ನಡೆದ ಸಂಘದ ಮಹಾಸಭೆಯಲ್ಲಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಸಂಘವು ವಿವಿಧ ವ್ಯಾಪಾರಗಳಿಂದ 98.10 ಲಕ್ಷ ರೂ. ಲಾಭ ಗಳಿಸಿದೆ. ವಷ್ಯಾಂತ್ಯಕ್ಕೆ 9091 ಸದಸ್ಯರಿದ್ದು, 10.11 ಕೋಟಿ ರೂ. ಷೇರು ಬಂಡವಾಳ ಸಂಗ್ರಹಿಸಲಾಗಿದೆ. ವರದಿ ಸಾಲಿನಲ್ಲಿ ಸಂಘವು 99.51 ಕೋಟಿ ರೂ. ಠೇವಣಿ ಹೊಂದಿದ್ದು, 156.51 ಕೋಟಿ ರೂ. ಹೊರಬಾಕಿ ಸಾಲ ಇದೆ. ವರ್ಷಾಂತ್ಯದಲ್ಲಿ ಶೇ.96.16 ಸಾಲ ವಸೂಲಾತಿ ಆಗಿದೆ. ‘ಸುವರ್ಣ ಸಂಗಮ ನಿಧಿ’ ಸಂಘದ ಕೃಷಿ ಸಾಲಗಾರರಿಗೆ ‘ಪಾಯಸ್’ ಮತ್ತು ಹವಾಮಾನ ಆಧಾರಿತ ಫಸಲ್ ಬಿಮಾ ಯೋಜನೆ, ‘ವಿದ್ಯಾಶ್ರೀ’ ಯೋಜನೆಗಳು ಜಾರಿಯಲ್ಲಿವೆ ಎಂದರು.
ಸುರೇಶ್ ಅತ್ರಮಜಲು, ಲಕ್ಷ್ಮಣ್ ನೆಡ್ಚಿಲ್, ಧರ್ಣಪ್ಪ ನಾಯ್ಕ, ಲೋಕೇಶ್ ಬೆತ್ತೋಡಿ, ಪೆಲಪ್ಪಾರು ವೆಂಕಟರಮಣ ಭಟ್, ಚಂದ್ರಶೇಖರ್ ತಾಳ್ತಜೆ, ರವೀಂದ್ರ ಆಚಾರ್ಯ, ಗಂಗಾಧರ ನೆಕ್ಕರಾಜೆ, ಸಂತೋಷ್ ಪರ್‌ಂದಾಜೆ, ಯಶವಂತ್ ಜಿ., ರೂಪೇಶ್ ರೈ, ಜಯಂತ ಪೊರೋಳಿ, ಕೆ.ವಿ.ಪ್ರಸಾದ್, ಮಾಜಿ ಶಾಸಕ ಸಂಜೀವ ಮಠಂದೂರು, ಕಂಗ್ವೆ ವಿಶ್ವನಾಥ ಶೆಟ್ಟಿ, ಎನ್.ಗೋಪಾಲ ಹೆಗ್ಡೆ, ಚಂದ್ರಿಕಾ ಭಟ್, ಇಸುಬು ಯು.ಕೆ., ಅಸ್ಕಾರಾಲಿ, ಹೆನ್ರಿ ಜಾನ್ ಲೋಬೋ, ಜಾನಕಿ, ಕೈಲಾರ್ ರಾಜಗೋಪಾಲ ಭಟ್, ಮಹೇಂದ್ರ ವರ್ಮ, ಹರಿರಾಮಚಂದ್ರ, ಅನುರಾಧಾ ಆರ್.ಶೆಟ್ಟಿ, ಮಾಧವಿ ರೈ, ರಾಮಚಂದ್ರ ಮಣಿಯಾಣಿ, ಉಪಾಧ್ಯಕ್ಷರಾದ ದಯಾನಂದ ಸರೋಳಿ, ನಿರ್ದೇಶಕರಾದ ರಾಜೇಶ್, ವಸಂತ ಪಿ., ರಾವ ನಾಯ್ಕ, ಸುಂದರ ಕೆ., ಶ್ರೀರಾಮ, ಅಗರ್ತ ಸುಬ್ರಹ್ಮಣ್ಯ ಕುಮಾರ್, ಗೀತಾ, ಸಂಧ್ಯಾ, ಉಷಾ ಮುಳಿಯ, ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಶರತ್ ಡಿ., ಸಿಇಒ ಶೋಭಾ ಕೆ., ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ ಶೆಟ್ಟಿ ಎಚ್. ಮೊದಲಾದವರಿದ್ದರು.