

ಉಪ್ಪಿನಂಗಡಿ: ಉಪ್ಪಿನಂಗಡಿ ಸರ್ಕಾರಿ ಮಾದರಿ ಶಾಲಾ ಹಳೇ ವಿದ್ಯಾರ್ಥಿ ಸಂಘದ ಮಹಾಸಭೆ ಇತ್ತೀಚೆಗೆ ನಡೆಯಿತು.
ಸಂಘದ ಅಧ್ಯಕ್ಷರಾಗಿ ವಿಜಯ ಕುಮಾರ್ ಕಲ್ಲಳಿಕೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಝಕಾರಿಯಾ ಕೊಡಿಪ್ಪಾಡಿ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಯೂನಿಕ್, ಸಹ ಕಾರ್ಯದರ್ಶಿಯಾಗಿ ವೈಶಾಲಿ ಕುಂದರ್, ಕೋಶಾಧಿಕಾರಿಯಾಗಿ ಪ್ರಜ್ಞಾ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಹರೀಶ್ ನಾಯಕ್ ನಟ್ಟಿಬೈಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಘುರಾಮ ರಾಮನಗರ, ಕ್ರೀಡಾ ಕಾರ್ಯದರ್ಶಿಯಾಗಿ ಸುನಿಲ್ ಸಂಗಮ್, ಗೌರವ ಸಲಹೆಗಾರರಾಗಿ ಐ.ಚಂದ್ರಶೇಖರ ನಾಯಕ್, ಕೆ.ಜಗದೀಶ ಶೆಟ್ಟಿ, ಅಸ್ಕರಾಲಿ ಮೇದರಬೆಟ್ಟು, ಯು.ಎಲ್.ಉದಯಕುಮಾರ್ ಹಾಗೂ ಯತೀಶ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.
ಸಮಿತಿ ಸದಸ್ಯರಾಗಿ ಜಮಾಲುದ್ದೀನ್ ಕಡವಿನ ಬಾಗಿಲು, ದಿನೇಶ್ ಬಿ, ಶಬೀರ್ ನಂದಾವರ, ವೇಣುಗೋಪಾಲ್ ಸಂಗಮ್, ಕಲಂದರ್ ಶಾಫಿ, ಪೌಝರ್ ಯು.ಟಿ, ಮಹಮ್ಮದ್ ರಫೀಕ್ ನಟ್ಟಿಬೈಲು, ಅಶ್ರಫ್ ರಾಮನಗರ, ಕಾನೂನು ಸಲಹೆಗಾರರಾಗಿ ಅಶ್ರಫ್ ಅಗ್ನಾಡಿ, ರಾಘವೇಂದ್ರ ನಾಯಕ್ ನಟ್ಟಿಬೈಲ್ ಅವರನ್ನು ಆಯ್ಕೆ ಮಾಡಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಮಜೀದ್ ಉಪಸ್ಥಿತರಿದ್ದರು.