

ಪೆರ್ಲ: ಪೆರ್ಲದ ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘದ 2025ರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಪುಷ್ಪಾ ಅಮೆಕ್ಕಳ, ಕಾರ್ಯದರ್ಶಿ ಗೋಪಿಕೃಷ್ಣ ಬದಿಯಡ್ಕ, ಖಜಾಂಚಿ ಜಗದೀಶ್, ಉಪಾಧ್ಯಕ್ಷ ಪುರಂದರ ಮಾಸ್ತರ್ ಪೆರ್ಲ, ಜತೆಕಾರ್ಯದರ್ಶಿ ಐತಪ್ಪ ನಾಯ್ಕ, ಸಂಘಟನಾ ಕಾರ್ಯದರ್ಶಿ ಲಕ್ಷ್ಮೀ ಆಯ್ಕೆಯಾದರು. ಶಾರದಾ ಮರಾಟಿ ಮಹಿಳಾ ವೇದಿಕೆ ಪೆರ್ಲದ ಅಧ್ಯಕ್ಷರಾಗಿ ವಾರಿಜಾ ಅಡ್ಯನಡ್ಕ, ಕಾರ್ಯದರ್ಶಿ ನವೀನ್ ಕುಮಾರಿ, ಉಪಾಧ್ಯಕ್ಷೆ ಕುಸುಮಾವತಿ ಬಿ., ಜೊತೆ ಕಾರ್ಯದರ್ಶಿ ದಿವ್ಯಾ ಮಲಂಗರೆ ಆಯ್ಕೆಯಾಗಿದ್ದಾರೆ.