

ಬೆಂಗಳೂರು: ಉಪಾಸನಾ ಸಂಸ್ಥೆಯು ನೀಡುವ ‘ಉಪಾಸನಾ ಪ್ರಶಸ್ತಿ’ಗೆ ಸುಗಮ ಸಂಗೀತ ಗಾಯಕಿ ಅಪರ್ಣಾ ನರೇಂದ್ರ ಹಾಗೂ ‘ಗಾನೋಪಾಸನಾ’ ಪ್ರಶಸ್ತಿಗೆ ವರ್ಷ ಸುರೇಶ್ ಮತ್ತು ಮೇಘನಾ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. ಎನ್.ಆರ್. ಕಾಲನಿಯ ಪತ್ತಿ ಸಭಾಂಗಣದಲ್ಲಿ 26ರ ಸಂಜೆ 6 ಗಂಟೆಗೆ ನಡೆಯಲಿರುವ ಸಂಸ್ಥೆಯ 26ನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಹಿರಿಯ ಸುಗಮ ಸಂಗೀತ ಗಾಯಕಿ ಮಾಲತಿ ಶರ್ಮಾ, ಕವಯತ್ರಿ ರಂಜನಿಪ್ರಭು ಹಾಗೂ ಉಪಾಸನಾ ಸಂಸ್ಥೆಯ ಗೌರವಾಧ್ಯಕ್ಷೆ ವಿ.ಎಸ್. ಭಾಗ್ಯಲಕ್ಷ್ಮೀ ಇತರರು ಭಾಗವಹಿಸಲಿದ್ದಾರೆ ಎಂದು ಉಪಾಸನಾ ಮೋಹನ್ ತಿಳಿಸಿದ್ದಾರೆ.