

ತುಮಕೂರು: ಉಪ ಲೋಕಾಯುಕ್ತ ಬಿ. ವೀರಪ್ಪ ಶನಿವಾರ ಬೆಳ್ಳಂಬೆಳಿಗ್ಗೆ ತುಮಕೂರಿನ ಜಿಲ್ಲಾ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.
ಜೈಲಿನ ವ್ಯವಸ್ಥೆಗಳ ಬಗ್ಗೆ ಕೈದಿಗಳನ್ನು ವಿಚಾರಿಸಿದ ಅವರು ಯಾವುದೊ ಅನಿರೀಕ್ಷಿತ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಪರಾಧಗಳಲ್ಲಿ ಭಾಗಿಯಾಗಿ ಶಿಕ್ಷೆಗೆ ಗುರಿಯಾಗಿದ್ದೀರಿ. ಇನ್ಮುಂದೆ ಮನ@ ಪರಿವರ್ತನೆ ಮಾಡಿಕೊಂಡು ಸರಿ ದಾರಿಯಲ್ಲಿ ನಡೆದು ಸತ್ಪ್ರಜೆಗಳಾಗುವಂತೆ ತಿಳಿಹೇಳಿದರು.
ಜೈಲಿನಲ್ಲಿರುವ ಕೈದಿಗಳ ಕೊಠಡಿ, ಅಡುಗೆ ಕೋಣೆ, ಆಹಾರ ಸಾಮಗ್ರಿಗಳ ಗುಣ ಮಟ್ಟವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ಲೋಕಾಯುಕ್ತ ಅಧೀಕ್ಷಕ ಎ.ವಿ. ಲಕ್ಷ್ಮಿ ನಾರಾಯಣ, ಜೈಲಿನ ಅಧೀಕ್ಷಕ ಮಲ್ಲಿಕಾರ್ಜುನ ಎಸ್. ಮಾಳಿ ಮತ್ತಿತರರು ಉಪಸ್ಥಿತರಿದ್ದರು.