ಸದೃಢ ರಾಷ್ಟ್ರ ನಿರ್ಮಾಣ ಉಪಾಧ್ಯಾಯರ ಕನಸು

H25-LXR01- MLA LAMANI
Published on

ಲಕ್ಷ್ಮೇಶ್ವರ: ಭಾರತದ ಅಖಂಡತೆ, ಏಕತೆ, ಅಭ್ಯುದಯಕ್ಕಾಗಿ ಸಮರ್ಪಿಸಿಕೊಂಡ ಭಾರತ ಮಾತೆಯ ಸುಪುತ್ರ ಪಂಡಿತ ದೀನದಯಾಳ ಉಪಾಧ್ಯಾಯರ ಚಿಂತನೆ, ಆದರ್ಶ, ಮೌಲ್ಯಗಳು ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.


ಪಟ್ಟಣದಲ್ಲಿ ಬುಧವಾರ ಬಿಜೆಪಿ ಮಂಡಳ ಮತ್ತು ನಗರ ಘಟಕದಿಂದ ಹಮ್ಮಿಕೊಂಡಿದ್ದ ಪಂ.ದೀನದಯಾಳ ಉಪಾಧ್ಯಾಯರ ಜನ್ಮ ದಿನಾಚರಣೆ ವೇಳೆ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು.


ಉಪಾಧ್ಯಾಯರ ಆಸೆ, ಕನಸಿನಂತೆ ಇಂದು ನರೇಂದ್ರ ಮೋದಿ ಸರ್ಕಾರ ದೇಶದ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸುತ್ತಿದೆ. ಪ್ರತಿಯೊಬ್ಬ ಭಾರತೀಯನೂ ಸ್ವಾಭಿಮಾನಿ ಜೀವನ ಸಾಗಿಸುವಂತಾಗಬೇಕು. ಸದೃಢ, ಸಶಕ್ತ ರಾಷ್ಟ್ರ ನಿರ್ವಣವಾಗಬೇಕು ಎಂಬುದು ಉಪಾಧ್ಯಾಯರ ಕನಸಾಗಿತ್ತು ಎಂದರು.


ಮಂಡಳದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ್, ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಶಿವಯೋಗಿ ಅಂಕಲಕೋಟಿ ಮುಂತಾದವರು ಮಾತನಾಡಿದರು. ಕಲ್ಲಪ್ಪ ಹಡಪದ, ಅನಿಲ ಮುಳಗುಂದ, ಗಿರೀಶ ಚೌರಡ್ಡಿ, ರುದ್ರಪ್ಪ ಉಮಚಗಿ, ವಿಜಯ ಮೆಕ್ಕಿ, ಮಹಾದೇವಪ್ಪ ಅಣ್ಣಿಗೇರಿ, ವಿಜಯ ಬೂದಿಹಾಳ, ನೀಲಪ್ಪ ಹತ್ತಿ, ಅಜ್ಜಪ್ಪ ಹೂಗಾರ, ಮಂಜುನಾಥ ಗಜಾಕೋಶ, ಸಂತೋಷ ಜಾವೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net