ಶ್ರೀ ಕ್ಷೇತ್ರ ಪುತ್ತಿಗೆ ಬ್ರಹ್ಮಕಲಶದ ಲಾಂಛನ ಅನಾವರಣ

Mbd_Puttige
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಇತಿಹಾಸ ಪ್ರಸಿದ್ಧ ಹದಿನೆಂಟು ವಾಗಣೆಗಳ ಒಡೆಯ, ಚೌಟರ ಸೀಮೆಯ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥ ದೇವಸ್ಥಾನದ ಪುನಃಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶದ ಪೋಸ್ಟರ್ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮ ಶುಕ್ರವಾರ ಪುತ್ತಿಗೆ ದೇಗುಲದ ಆವರಣದಲ್ಲಿ ನಡೆಯಿತು.

‘ಪುತ್ತೆ’ ಎಂಬ ಹೆಸರಿನ ಭಿತ್ತಿಪತ್ರ ಮತ್ತು ಲಾಂಛನವನ್ನು ಹಿರಿಯ ಕರ ಸೇವಕ ಗಂಗಯ್ಯ ಗೌಡ ಪಾದೆಮನೆ ಹಾಗೂ ವಿಠಲ ಗೌಡ ಪುತ್ತಿಗೆ ಬೀಡು ಅನಾವರಣಗೊಳಿಸಿದರು.

ದೇವಸ್ಥಾನದ ಆನುವಂಶಿಕ ಮೊಕ್ತೇಸರ, ಚೌಟರ ಅರಮನೆಯ ಕುಲದೀಪ್ ಎಂ. ವಾತನಾಡಿ, ಫೆಬ್ರವರಿ 28ರಿಂದ ವಾರ್ಚ್ 7ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ, ಪುನಃಪ್ರತಿಷ್ಠಾಪನೆ ನಡೆಯಲಿದೆ. ಪುರಾಣ ಪ್ರಸಿದ್ಧ ಹೆಸರಾದ ‘ಪುತ್ತೆ’ ಎಂಬ ಹೆಸರಿನೊಂದಿಗೆ ಕ್ಷೇತ್ರವು ಅನಾದಿ ಕಾಲದಿಂದಲೂ ಗುರುತಿಸಿಕೊಂಡು ಬಂದಿತು. ಆದರೆ ಇದೀಗ ಆ ಹೆಸರು ಅಳಿವಿನ ಅಂಚಿಗೆ ತಲುಪಿದ್ದು, ಅದನ್ನು ಮತ್ತೊಮ್ಮೆ ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಪುತ್ತೆ ಎಂಬ ಹೆಸರನ್ನು ಭಿತ್ತಿಪತ್ರ ಮತ್ತು ಲಾಂಛನದಲ್ಲಿರಿಸಲಾಗಿದೆ. ಲಾಂಛನವನ್ನು ಸ್ತುತಿ ಡಿಸೈನ್ ಕೋಟೇಶ್ವರದ ಸುದೀಪ್ ಶೆಟ್ಟಿ ವಿನ್ಯಾಸಗೊಳಿಸಿದ್ದಾರೆ ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿ ಶ್ರೀಪತಿ ಭಟ್, ಜಯಶ್ರೀ ಅಮರನಾಥ್ ಶೆಟ್ಟಿ, ಪ್ರಧಾನ ಅರ್ಚಕ ಅಡಿಗಳ್ ಅನಂತಕಷ್ಣ ಭಟ್, ಶಿವಪ್ರಸಾದ್ ಆಚಾರ್ಯ, ವಾದಿರಾಜ್ ಮಡ್ಮಣಾಯ, ವಿದ್ಯಾ ರಮೇಶ್ ಭಟ್, ಪ್ರಶಾಂತ್ ಭಂಡಾರಿ ಮತ್ತಿತರರಿದ್ದರು. ಸಂದೀಪ್ ಶೆಟ್ಟಿ ಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net