ಸ್ಮತಿ ಶಾರದಾ ಹಳೇ ವಿದ್ಯಾರ್ಥಿಗಳ ಪುನರ್ಮಿಲನ

Ull_Students Reunion
Published on

ಉಳ್ಳಾಲ: ತಲಪಾಡಿ ಶಾರದಾ ವಿದ್ಯಾನಿಕೇತನದಲ್ಲಿ ವಿದ್ಯಾರ್ಜನೆಗೈದ ಹಳೇ ವಿದ್ಯಾರ್ಥಿಗಳ ಸಮ್ಮಿಲನ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಅಭಿನಂದನಾ ಕಾರ್ಯಕ್ರಮ ‘ಸ್ಮತಿ ಶಾರದಾ’ ಕಾರ್ಯಕ್ರಮ ಶಾಲೆಯ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆಯಿತು.

ಶಾರದಾ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆ ಕೇವಲ ಜ್ಞಾನ ನೀಡುವ ಸ್ಥಳವಾಗಿರದೆ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ರೂಪಿಸಿ, ಶಿಸ್ತು, ಮೌಲ್ಯ ಕಲಿಸಿ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಳೇ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಮೇಲೆ ಭಾವನಾತ್ಮಕ ನಂಟು ಹೊಂದಿರುತ್ತಾರೆ. ಇಂತಹ ಪುನರ್ಮಿಲನದ ಕಾರ್ಯಕ್ರಮಗಳು ತಾವು ಕಲಿತ ಶಾಲೆಯ ಮೇಲಿನ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸಲು ಸಹಕಾರಿ. ಹಳೇ ವಿದ್ಯಾರ್ಥಿಗಳ ಯಶೋಗಾಥೆಗಳು ಹೊಸ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ಸು ಪಡೆಯಲು ಪ್ರೇರಣೆ ನೀಡುತ್ತದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಶಾಲೆಯ ಕೀರ್ತಿ ಹೆಚ್ಚಿಸಿದ ಹಳೇ ವಿದ್ಯಾರ್ಥಿಗಳಾದ ಡಾ.ಸಯ್ಯದ್ ಆದ್ನಾನ್, ನಂದರಾಜ್, ಅನಂತ ಪದ್ಮನಾಭ ನಾಯರ್, ಡಾ.ವಿದ್ಯಾ ಡಿ.ರೈ, ನಿಹಾಲ್ ಶೆಟ್ಟಿ, ಅಮೋಘ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಶಾರದಾ ಸಮೂಹ ಸಂಸ್ಥೆ ನಿರ್ದೇಶಕ ಸಮೀರ್ ಪುರಾಣಿಕ್, ಶಾರದಾ ಶಿಕ್ಷಣ ಸಂಸ್ಥೆ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಶಿಕ್ಷಕ- ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು. ಶಾರದಾ ವಿದ್ಯಾನಿಕೇತನ ಶಾಲೆ ದೈನಿಕ ವಿಭಾಗ ಪ್ರಾಂಶುಪಾಲ ಮೋಹನ್‌ದಾಸ್ ಸ್ವಾಗತಿಸಿದರು. ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net