ಸಿಂಗಲ್ ಬ್ಯಾರಲ್ ಕೋವಿ ಅನಾವರಣ

ಚಿತ್ರ 12ಎಸ್ ಡಿ ಪಿ 02
ಸಿಂಗಲ್ ಬ್ಯಾರಲ್ ಕೋವಿಯನ್ನು ಅಮ್ಮತ್ತಿಯ ಕಲ್ ಗುಡಿ ಗನ್ ಹೌಸ್‌ನಲ್ಲಿ ಭಾನುವಾರ ವಿರಾಜಪೇಟೆ ಶಾಸಕ ಅಜ್ಜಿಕುಟೀರ ಎಸ್.ಪೊನ್ನಣ್ಣ ಅನಾವರಣಗೊಳಿಸಿದರು. ಶಂಭು ಸೋಮಣ್ಣ, ಪ್ರತಾಪಸಿಂಹ, ಸುಜಾ ಕುಶಾಲಪ್ಪ ಇತರರು ಇದ್ದರು.
Published on

ಸಿದ್ದಾಪುರ: ಅಮ್ಮತ್ತಿಯ ಕಲ್ಗುಡಿ ಆರ್ಮರಿಯಿಂದ ಸಿಂಗಲ್ ಬ್ಯಾರಲ್ ಕೋವಿಯನ್ನು ಇತ್ತೀಚೆಗೆ ವಿರಾಜಪೇಟೆ ಶಾಸಕ ಅಜ್ಜಿಕುಟೀರ ಎಸ್.ಪೊನ್ನಣ್ಣ ಅನಾವರಣಗೊಳಿಸಿದರು.

ಕೊಡಗಿನ ವೀರಪರಂಪರೆಯ ವಾರಿಯರ್ ಕೂರ್ಗ್ ಲೋಗೋ ಹೊಂದಿರುವ ಅತ್ಯುತ್ತಮ ಗುಣಮಟ್ಟದ ಭಾರತೀಯ ಸಿಂಗಲ್ ಬ್ಯಾರಲ್ನ ನೂತನ ಕೋವಿಯನ್ನು ಅಮ್ಮತ್ತಿಯ ಕಲ್ ಗುಡಿ ಗನ್ ಹೌಸ್‌ನಲ್ಲಿ ಗಾಳಿಗೆ ಗುಂಡು ಹಾರಿಸುವ ಮೂಲಕ ಪೊನ್ನಣ್ಣ ಬಿಡುಗಡೆ ಮಾಡಿದರು. ಆರ್ಮರಿಯ ಕಲ್ ಗುಡಿ ಸಂಸ್ಥಾಪಕ ನೆಲ್ಲಮಕ್ಕಡ ಶಂಭು ಸೋಮಣ್ಣ, ಸಂಸದ ಪ್ರತಾಪಸಿಂಹ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net