ಸಾಲಿಗ್ರಾಮ ದೇವಳದಲ್ಲಿ ನಾಮಫಲಕ ಅನಾವರಣ

devala
ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಳದ ದೇಣಿಗೆ ನಿಧಿ ನಾಮಫಲಕವನ್ನು ಉದ್ಯಮಿ ಪ್ರಕಾಶ ಮಯ್ಯ ಮತ್ತು ಮಂಜುಳಾ ದಂಪತಿ ಉದ್ಘಾಟಿಸಿದರು.
Published on

ಕೋಟ: ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಶಾಶ್ವತ ಭೋಜನ ನಿಧಿಗೆ ಯಮುನಾ ಮತ್ತು ಚಂದ್ರಶೇಖರ ಮಯ್ಯ ದಂಪತಿ ಸ್ಮರಣಾರ್ಥ ಉದ್ಯಮಿ ಪ್ರಕಾಶ ಮಯ್ಯ ಮತ್ತು ಮಂಜುಳಾ ದಂಪತಿ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದು, ಇದರ ನಾಮಫಲಕ ಅನಾವರಣಗೊಳಿಸಲಾಯಿತು.

ದೇವಳದ ವತಿಯಿಂದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ದೇಣಿಗೆದಾರರನ್ನು ಸನ್ಮಾನಿಸಿದರು. ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಕೂಟ ಮಹಾಜಗತ್ತಿನ ಕೇಂದ್ರ ಸಂಸ್ಥೆಯ ಪೂರ್ವ ಕೋಶಾಧಿಕಾರಿ ತಾರಾನಾಥ ಹೊಳ್ಳ, ಮಲ್ಲಿಕಾ ಹೊಳ್ಳ ಉಪಸ್ಥಿತರಿದ್ದರು. ಹಿರಿಯ ಸಿಬ್ಬಂದಿ ಶ್ರೀಕಾಂತ ಕಲ್ಕೂರ ವಂದಿಸಿದರು. ಗಣೇಶ ಭಟ್ಟ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net