

ಮುರಗೋಡ :ಸುಮಾರು ವರ್ಷಗಳಿಂದ ಮುರಗೋಡ ತಲ್ಲೂರು ರಸ್ತೆ ಹದಗೆಟ್ಟು ಹೋಗಿತ್ತು. ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಮುರಗೋಡ ತಲ್ಲೂರ ರಸ್ತೆಯನ್ನು ಹೊರಟ್ಟಿ ಓಣಿಯಿಂದ 5 ಲಕ್ಷ ರೂ. ವೆಚ್ಚದಲ್ಲಿ 500 ಮೀಟರ್ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಆದರೆ, ಅವೈಜ್ಞಾನಿಕ ರಸ್ತೆ ಕಾಮಗಾರಿ ಆಗಿದೆ. ಇದನ್ನು ಸರಿಪರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮುರಗೋಡ ತಲ್ಲೂರ ಮಾರ್ಗವಾಗಿ ಪ್ರತಿದಿನ ನೂರಾರು ವಾಹನಗಳು ಸಂಚಾರ ಮಾಡುತ್ತವೆ. ರಸ್ತೆ ಪಕ್ಕ ಚರಂಡಿ ಇಲ್ಲದೇ ಇರುವ ಕಾರಣಕ್ಕೆ ನೀರು ರಸ್ತೆ ಮೇಲೆ ಹರಿದು ಗಲೀಜು ಆಗುತ್ತಿತ್ತು. ಮೊದಲೇ ರಸ್ತೆ ದುರಸ್ತಿಯಲ್ಲಿದ್ದರಿಂದ ಜನರು ತೀವ್ರ ತೊಂದರೆ ಅನುಭವಿಸಲು ಆರಂಭಿಸಿದ್ದರು. ಇದರಿಂದ ರೋಸಿ ಹೋದ ಜನರು ರಸ್ತೆ ದುರಸ್ತಿ ಮಾಡಿಸಬೇಕೆಂದು ಆಗ್ರಹಿಸಿದ್ದರು. ಇದರಿಂದ ಅನುದಾನ ಮಂಜೂರಾಗಿ ರಸ್ತೆ ನಿರ್ಮಾಣವಾಗಿದೆ. ಆದರೆ, ಮಳೆ ನೀರಿಗೆ ರಸ್ತೆ ಕೊರೆತ ಉಂಟಾಗಿ ಹಾಳಾಗಿದೆ. ಇದು ಅವೈಜ್ಞಾನಿಕ ಕಾಮಗಾರಿ ಪ್ರತಿಲ ಎಂದು ಜನರು ಆರೋಪಿಸಿ ಮರು ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ.
ಮುರಗೋಡ ತಲ್ಲೂರ ಮಾರ್ಗವಾಗಿ ಹೊರಟ್ಟಿ ಹತ್ತಿರ ತುಂಬಾ ಹದಗೆಟ್ಟ ರಸ್ತೆ ದುರಸ್ತಿ ಕಾಮಗಾರಿ ನಡೆದಿದೆ. ರಸ್ತೆ ಕೂರೆದು ಹೋಗದಂತೆ ಎರಡು ಬದಿಗೆ ಚರಂಡಿ ನಿರ್ಮಿಸಲಾಗುವುದು.
> ಅನೀಲ ಎಂ. ಪಿಡಬ್ಲ್ಯುಡಿ ಎಇಇ