ಅವೈಜ್ಞಾನಿಕ ಯೋಜನೆ ಜಾರಿ

31 Ylb 01
ಯಲಬುರ್ಗಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕಾರಿಣಿ ಸಭೆಯನ್ನು ಮಾಜಿ ಸಚಿವ ಹಾಲಪ್ಪ ಆಚಾರ್ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ್, ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಪ್ರಮುಖರಾದ ಬಸಲಿಂಗಪ್ಪ ಭೂತೆ, ರತನ್ ದೇಸಾಯಿ, ಶಂಕ್ರಪ್ಪ ಸುರಪುರ, ಶಿವಲೀಲಾ ದಳವಾಯಿ ಇದ್ದರು.
Published on

ಯಲಬುರ್ಗಾ: ರಾಜ್ಯ ಸರ್ಕಾರ ಜಾರಿಗೆ ತಂದ ಯೋಜನೆಗಳು ಜನರಿಗೆ ಸಮರ್ಪಕವಾಗಿ ಪೂರೈಕೆಯಾಗಿಲ್ಲ. ಅಭಿವೃದ್ಧಿಯಿಂದ ರಾಜ್ಯ ವಂಚಿತಗೊಂಡಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಆರೋಪಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ಅವೈಜ್ಞಾನಿಕ ಯೋಜನೆ ಜಾರಿಗೊಳಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನ ಹಣೆಬರಹ ವಷರ್ದ ಅವಧಿಯಲ್ಲಿ ಗೊತ್ತಾಗಿದೆ.

ಭ್ರಷ್ಟಾಚಾರ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಹೊರೆ ಹಾಕಿದೆ. ಇಲಾಖೆ, ನಿಗಮ, ಸರ್ಕಾರಿ ಕಚೇರಿಗಳನ್ನು ಲೂಟಿ ಮಾಡುವ ಮೂಲಕ ಜನತೆಗೆ ಮೋಸ ಮಾಡಿದೆ. ಅವಕಾಶವಾದಿ ಕೆಲಸ ಮಾಡುವ ಇವರಿಗೆ ಜನ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಜನಪರ ಕೆಲಸಗಳಾಗಿವೆ. ಕೊಪ್ಪಳ ಏತ ನೀರಾವರಿ ಯೋಜನೆ ಮೂಲಕ ಕ್ಷೇತ್ರದ ಅನೇಕ ಕೆರೆಗಳಿಗೆ ನೀರು ತಂದು ಹಾಕಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಇದೂವರೆಗೂ ಒಂದು ಕೆರೆ ಸಹ ತುಂಬಿಲ್ಲ.

ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಸಿಎಂ ಆರ್ಥಿಕ ಸಲಹೆಗಾರ ಏನು ಮಾಡುತ್ತಿದ್ದಾರೆ. ಇದ್ದ ಕೆರೆಗಳಿಗೆ ನೀರು ತುಂಬಿಸದೆ ಪರ್ಯಾಯವಾಗಿ 970 ಕೋಟಿ ರೂ. ಅನುದಾನ ತಂದಿರುವುದು ಯಾವ ಉದ್ದೇಶಕ್ಕೆ ಎಂಬುದು ತಿಳಿಯುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಲು ನಿಷ್ಕಾಳಜಿ ವಹಿಸಿರುವುದರಿಂದ ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಪ್ರಧಾನ ಕಾರ್ಯದರ್ಶಿ ಅಯ್ಯನಗೌಡ ಕೆಂಚಮ್ಮನವರ್, ಪ್ರಮುಖರಾದ ಬಸಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ರತನ್ ದೇಸಾಯಿ, ಶಂಕ್ರಪ್ಪ ಸುರಪುರ, ಶಿವಶಂಕರ ದೇಸಾಯಿ,

ಶಿವಪ್ಪ ವಾದಿ, ಶರಣಪ್ಪ ಈಳಿಗೇರ್, ಶಿವಲೀಲಾ ದಳವಾಯಿ, ಗೌರಾ ಬಸವರಾಜ, ಗಾಳೆಪ್ಪ ಓಜನಹಳ್ಳಿ, ಅಯ್ಯಪ್ಪ ಗುಳೇದ, ವಿಶ್ವನಾಥ ಮರಿಬಸಪ್ಪನವರ್, ಸಿದ್ರಾಮೇಶ ಬೆಲೇರಿ, ವಸಂತ ಭಾವಿಮನಿ, ಅಮರೇಶ ಹುಬ್ಬಳ್ಳಿ, ಶಕುಂತಲಮ್ಮ ಮಾಲಿಪಾಟೀಲ್, ಕಳಕಪ್ಪ ತಳವಾರ್ ಶಿವಕುಮಾರ ನಾಗಲಾಪುರಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net