ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿ

12KWR3
Published on

ಕಾರವಾರ: ಸಾಂಪ್ರದಾಯಿಕ ಆಚರಣೆ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಅವಕಾಶ ನೀಡುವಂತೆ ಉತ್ತರ ಕನ್ನಡ ಕರಾವಳಿ ತಾಲೂಕುಗಳ ರಂಗಭೂಮಿ ಕಲಾವಿದರ ವೇದಿಕೆಯ ಸದಸ್ಯರು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ದೇಶದಲ್ಲಿ ಅನ್​ಲಾಕ್ 5 ಜಾರಿಯಲ್ಲಿದೆ. ಎಲ್ಲ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿವೆ. ಆದರೆ, ಕಳೆದ 10 ತಿಂಗಳಿಂದ ಸಾಂಪ್ರದಾಯಿಕ ಆಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇನ್ನೂ ಲಾಕ್​ಡೌನ್ ಹಂತದಲ್ಲೇ ಇವೆ. ಕಲೆಯನ್ನೇ ನಂಬಿದ ಸಾವಿರಾರು ಕಲಾವಿದರು, ಲೈಟಿಂಗ್, ಡೆಕೋರೇಷನ್, ಸೌಂಡ್ ಸಿಸ್ಟಂ, ರಂಗ ಸಜ್ಜಿಕೆ ಮುಂತಾದ ಎಲ್ಲ ವೃತ್ತಿಯಲ್ಲಿರುವವರು ತೀವ್ರ ಸಂಕಷ್ಟದಲ್ಲಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಲೂ ಅಸಾಧ್ಯವಾಗಿದೆ. ಇದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದು. ಆದರೆ, ಅಲ್ಲಿ ಪರಸ್ಪರ ಅಂತರ, ಮಾಸ್ಕ್ ಧರಿಸದೇ ಓಡಾಡಿದಲ್ಲಿ ಅಥವಾ ಯಾರಿಗಾದರೂ ಕೋವಿಡ್ ಕಂಡುಬಂದು ತೊಂದರೆ ಉಂಟಾದಲ್ಲಿ ಅದರ ಜವಾಬ್ದಾರಿಯನ್ನು ಸಂಘಟನೇ ತೆಗೆದುಕೊಳ್ಳಬೇಕು ಎಂದು ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಷರತ್ತು ವಿಧಿಸಿದರು.

ವೇದಿಕೆಯ ಗಜಾನನ ನಾಯ್ಕ ದೇವಳಮಕ್ಕಿ, ನಾಗರಾಜ ಜಾಂಬಾಳೆಕರ್ ಅಂಕೋಲಾ, ಮಹಾಬಲೇಶ್ವರ ನಾಯ್ಕ ಕುಮಟಾ, ಮಂಜುನಾಥ ನಾಯ್ಕ ಹೊನ್ನಾವರ, ಅಶೋಕ ಮಹಾಲೆ ಭಟ್ಕಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net