

ಬಂಟ್ವಾಳ: ಜಾತಿ, ಮತ, ಪಂಥ, ಪಕ್ಷ ಭೇದ ಮರೆತು ಊರವರು, ಪಾಲಕರು ಮತ್ತು ಹಿರಿಯ ವಿದ್ಯಾರ್ಥಿಗಳು ಸರಕಾರಿ ಶಾಲೆ ಉನ್ನತಿಗೆ ಒಗ್ಗಟ್ಟಿನಿಂದ ದುಡಿಯಬೇಕು. ವಿದ್ಯಾರ್ಥಿಗಳನ್ನು ರಾಷ್ಟ್ರದ ಭವ್ಯ ಪ್ರಜೆಗಳನ್ನಾಗಿ ರೂಪಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ನರಿಕೊಂಬು ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್ ಹೇಳಿದರು.
ಶಂಭೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 98ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯಮಿ ಕೆ.ಸಂಜೀವ ಪೂಜಾರಿ ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ರಮೇಶ ಎಂ.ಬಾಯಾರು ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಹೇಮಚಂದ್ರ ಭಂಡಾರದ ಮನೆ, ಕಡೇಶಿವಾಲಯ ಪಿಡಿಒ ಸುನಿಲ್ ಕುಮಾರ್, ಪಿಡಬ್ಲುೃಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಕರ್ನಾಟಕ ಫುಡ್ ಕಮಿಷನ್ ಸದಸ್ಯ ಸುಮಂತ ರಾವ್, ಸಾಮಾಜಿಕ ಕಾರ್ಯಕರ್ತ ಆನಂದ ಎ.ಶಂಭೂರು, ಪುಳಿಂಚ ಸೇವಾ ಪ್ರತಿಷ್ಠಾನದ ಶ್ರೀಧರ ಶೆಟ್ಟಿ, ಮಂಗಳೂರು ಕಾರ್ಪೋರೇಟರ್ ಸುಮಂಗಳ ರಾವ್, ಸುದರ್ಶನ್ ಬಜ, ಪ್ರಸಾದ ಭಂಡಾರದಮನೆ, ಕೃಷ್ಣಪ್ಪ ನಾಟಿ ಉಪಸ್ಥಿತರಿದ್ದರು.
ಸಾಧಕರಾದ ರಮೇಶ ಎಂ.ಬಾಯಾರು, ಕೆ.ಸಂಜೀವ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಹಳೇ ವಿದ್ಯಾರ್ಥಿ ಹೆನ್ರಿ ಬುಕ್ಕೆಲ್ಲೊ, ಯಕ್ಷಗಾನ ನಾಟ್ಯ ಗುರು ಜಗನ್ನಾಥ ಸಣ್ಣಕುಕ್ಕು ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರು, ಸಾಧಕರು ಮತ್ತು ಕಲಿಕಾ ಸಾಧಕ ವಿದ್ಯಾರ್ಥಿಗಳಿಗೆ ಪದಕ ನೀಡಿ ಪುರಸ್ಕರಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತ ಶಿಕ್ಷಕರು, ಪಾಲಕರಿಗೆ ಬಹುಮಾನ ನೀಡಲಾಯಿತು.
ಮುಖ್ಯಶಿಕ್ಷಕ ಜಯರಾಮ್ ಡಿ.ಪಡ್ರೆ ಸ್ವಾಗತಿಸಿ, ಶಿಕ್ಷಕರಾದ ಚಿತ್ರಾ ಕೆ.ವರದಿ ವಾಚಿಸಿದರು. ಪವನ್ ರಾಜ್ ಸನ್ಮಾನ ಪತ್ರ ವಾಚಿಸಿ, ಜಯಂತಿ ವಂದಿಸಿದರು. ಮಧುಸೂದನ ನಿರೂಪಿಸಿದರು. ಶಿಕ್ಷಕಿಯರಾದ ಇಂದಿರಾ, ದಯಾವತಿ, ಜ್ಯೋತಿ, ಮೀನಾಕ್ಷಿ, ಮಾಲಾಶ್ರೀ, ಉಷಾ ಸಹಕರಿಸಿದರು.