ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಡಾ.ಎಸ್.ಎಲ್.ಭೈರಪ್ಪ ಭೇಟಿ

Btw_Byrappa
Published on

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಶನಿವಾರ ಭೇಟಿ ನೀಡಿದರು. ವಿದ್ಯಾಕೇಂದ್ರದ ಮಕ್ಕಳ ಚಟುವಟಿಕೆ, ಮಿನಿ ಕ್ರೀಡೋತ್ಸವವನ್ನು ವೀಕ್ಷಿಸಿದರು. ನಂತರ ಭಾರತ ಮಾತೆಗೆ ದೀಪಪ್ರಜ್ವಲನೆ ಮಾಡಿ ಪುಷ್ಪಾರ್ಚನೆ ಮಾಡಿದರು.

ಬಳಿಕ ಮಾತನಾಡಿ, ಭಾರತದ ಸನಾತನ ಧರ್ಮವನ್ನು ಉಳಿಸಿಕೊಳ್ಳುವಲ್ಲಿ ಈ ವಿದ್ಯಾಸಂಸ್ಥೆಯು ಮಹತ್ತರವಾದ ಪಾತ್ರವನ್ನು ವಹಿಸಿದೆ. ಪಠ್ಯಪುಸ್ತಕ ಹೊರತಾದ ಜೀವನ ಶಿಕ್ಷಣವನ್ನು ಈ ವಿದ್ಯಾಕೇಂದ್ರದಲ್ಲಿ ನೀಡಲಾಗುತ್ತಿದೆ. ಕಲಿಕೆಗೆ ಬೇಕಾದುದು ಪೂರಕ ವಾತಾವರಣವೇ ಹೊರತು ಪಠ್ಯಕ್ರಮ ಅಲ್ಲ. ಅದು ಇಲ್ಲಿ ಸಾಕಾರಗೊಂಡಿದೆ ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ, ಸಾಹಿತಿ ಸಹನಾ ವಿಜಯ್‌ಕುಮಾರ್, ಜೋತಿಷಿ ಡಾ.ರವಿ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋವಯಾಜಿ ಹಾಗೂ ಡಾ.ಕಮಲಾ ಪ್ರಭಾಕರ್ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಶ್ಮಿತಾ ಭಟ್ ಸ್ವಾಗತಿಸಿ, ಅಧ್ಯಾಪಕ ಜಿನ್ನಪ್ಪ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net