ವಿಜಯವಾಣಿ ಸುದ್ದಿಜಾಲ ಶಿಡ್ಲಟ್ಟ
ಧಾರ್ಮಿಕ ಕಾರ್ಯಗಳಲ್ಲಿ ಜಾತಿ, ಮತ, ಪಕ್ಷ ಬಿಟ್ಟು ಎಲ್ಲರೂ ಒಗ್ಗೂಡಬೇಕು. ಇದರಿಂದ ನಮ್ಮ ಮಧ್ಯೆ ಸಾಮರಸ್ಯ ಮೂಡಿ ಅಭಿವೃದ್ಧಿಗೆ ನಾಂದಿಯಾಗಲಿದೆ ಎಂದು ಸಂಸದ ಎಂ.ಮಲ್ಲೇಶ್ಬಾಬು ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಪುನರ್ನಿರ್ಮಾಣವಾದ ಜೀಣೋರ್ದ್ಧಾರ ಕಾರ್ಯಕ್ಕೆ ಸಿದ್ಧಗೊಳ್ಳುತ್ತಿರುವ ಶ್ರೀಸೋಮೇಶ್ವರಸ್ವಾಮಿ ದೇವಾಲಯಕ್ಕೆ ೇತ್ರದ ಶಾಸಕ ಬಿ.ಎನ್.ರವಿಕುಮಾರ್ ಜತೆ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿ ವೈಯಕ್ತಿಕವಾಗಿ ದೇಣಿಗೆ ನೀಡಿ ಮಾತನಾಡಿದರು.
ನಗರದ ಹೃದಯ ಭಾಗದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಶಿಥಿಲಗೊಂಡಿದ್ದ ದೇವಾಲಯವನ್ನು ಮರು ನಿರ್ಮಾಣ ಮಾಡಿದ್ದಕ್ಕೆ, ಈ ಪುಣ್ಯ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಇನ್ನು ಕೋಲಾರ ಸಂಸತ್ ಕೇಂದ್ರ ಸ್ಥಾನದಿಂದ ಶಿಡ್ಲಟ್ಟ ದೂರವಿದೆ. ಹಾಗಾಗಿ ಶಿಡ್ಲಟ್ಟಕ್ಕೆ ಭೇಟಿ ನೀಡುವುದು ಕಡಿಮೆ. ಆದರೆ ಈ ಭಾಗದ ಜನರ ಸಂಪರ್ಕದಲ್ಲಿ ಇದ್ದೇನೆ.ಈ ೇತ್ರದಲ್ಲಿ ಇಂತಹ ಕೆಲಸ ಆಗಬೇಕು ಎಂದು ಅವರು ಹೇಳಿದ ಕೆಲಸವನ್ನು ನಾನು ಚಾಚೂ ತಪ್ಪದೆ ಮಾಡಿಕೊಂಡು ಬರುತ್ತಿದ್ದೇನೆ ಎಂದರು.
ಐದಾರು ತಿಂಗಳ ಹಿಂದೆ ಮರು ನಿರ್ಮಾಣಗೊಳ್ಳುತ್ತಿದ್ದ ದೇವಾಲಯವನ್ನು ವೀಸಿದ್ದೆ. ಅಂದು ಶಾಸಕರು ನನಗೆ ಹೇಳಿದಂತೆ ಇಂದು ನನ್ನ ಕೈಲಾದ ನೆರವನ್ನು ನೀಡುತ್ತಿದ್ದೇನೆ, ಎಲ್ಲರೂ ಒಳ್ಳೆಯ ಕೆಲಸದಲ್ಲಿ ಕೈ ಜೋಡಿಸಿ ಎಂದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಶಿಡ್ಲಟ್ಟ ನಗರ ನಿರ್ಮಾತೃ ಅಲಸೂರಮ್ಮ ಶಿವನೇಗೌಡ ಅವರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ದೇವಾಲಯವನ್ನು ಶಿಡ್ಲಟ್ಟ ನಗರದಲ್ಲಿ ಎಲ್ಲರೂ ಕೈ ಜೋಡಿಸಿ ಮರು ನಿರ್ಮಾಣದಂತ ಪುಣ್ಯದ ಕೆಲಸದಲ್ಲಿ ಭಾಗಿ ಆಗಿರುವುದು ಸಂತಸ ಎಂದರು.
ಸಂಸದ ಮಲ್ಲೇಶ್ಬಾಬು ಅವರು ಸಂಬಳದಲ್ಲಿ ಈ ದೇವಾಲಯದ ಜೀಣೋರ್ದ್ಧಾರಕ್ಕೆ ದೇಣಿಗೆ ನೀಡಿದ್ದು ಈೇತ್ರದ ಎಲ್ಲ ಜನತೆಯ ಪರವಾಗಿ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.ಧಾರ್ಮಿಕ ಕಾರ್ಯಗಳಲ್ಲಿ, ಇನ್ನೊಬ್ಬರ ಕಷ್ಟದಲ್ಲಿ ನಾವು ಭಾಗಿ ಆಗುವ ಕೆಲಸ ಮಾಡಬೇಕು, ಆಗ ಮಾತ್ರ ಕಾಲ ಕಾಲಕ್ಕೆ ಮಳೆ ಬೆಳೆಯಾಗಿ ಹಸಿರು ತುಂಬಿ ಸುಖ ಸಂತೋಷದ ಬದುಕು ನಮ್ಮೆಲ್ಲರದ್ದಾಗಲಿದೆ ಎಂದು ಆಶಿಸಿದರು. ಸಂಸದ ಮಲ್ಲೇಶ್ ಬಾಬು ಅವರು ವೈಯುಕ್ತಿವಾಗಿ 5 ಲಕ್ಷ ರೂ.ದೇಣಿಗೆ ನೀಡಿದರು. ನ.1 ರಿಂದ 3 ದಿನಗಳ ಕಾಲ ದೇವಾಲಯದ ಜೀಣೋರ್ದ್ಧಾರ ಕಾರ್ಯ ನಡೆಯಲಿದ್ದು, 5 ಸಾವಿರ ಮಂದಿ ಭಾಗವಹಿಸುವ ನಿರೀೆಯಿದ್ದು ಎಲ್ಲರಿಗೂ ಪ್ರಸಾದ, ಊಟದ ವ್ಯವಸ್ಥೆ ಇರಲಿದೆ.