ನಾಡಿನ ಜ್ವಲಂತ ಸಮಸ್ಯೆಗಳಿಗೆ ನಿರಂತರ ಹೋರಾಟ

18-pnp 5
Published on

ಪಾಂಡವಪುರ: ಹೋರಾಟಗಾರರು ಜೀವನದಲ್ಲಿ ಶಿಸ್ತು, ಸಂಯಮ ಬೆಳೆಸಿಕೊಳ್ಳುವುದರ ಜತೆಗೆ ಸಾಮಾಜಿಕ ಬದುಕನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕನ್ನಡ ಸೇನೆ ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಹೇಳಿದರು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ಸೇನೆ ಸಂಘಟನೆಗೆ ತಾಲೂಕು ಪದಾಧಿಕಾರಿಗಳ ನೇಮಕ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಸಂಘಟನೆ ನಾಡಿನ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತಿದೆ. ನಾಡು-ನುಡಿ, ನೆಲ-ಜಲ ಸೇರಿದಂತೆ ಯಾವುದೇ ಸಮಸ್ಯೆ ಎದುರಾದರೂ ಹೋರಾಟಕ್ಕೆ ನಿಲ್ಲುತ್ತೇವೆ. ಸದಾ ಚೈತನ್ಯದ ಚಿಲುಮೆಯಂತೆ ಚಳವಳಿಗಾರರು ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಸಲಹೆ ನೀಡಿದರು.


ಸಂಘಟನೆಯು ಮೈಶುಗರ್ ಸಕ್ಕರೆ ಕಾರ್ಖಾನೆ, ರೈತರ ಸಮಸ್ಯೆಗಳು ಬಂದಾಗ ನಿರಂತರವಾಗಿ ಹೋರಾಟ ನಡೆಸಿದೆ. 150 ದಿನಗಳ ಕಾಲ ನಡೆದ ಕಾವೇರಿ ಹೋರಾಟದಲ್ಲಿ ಕನ್ನಡ ಸೇನೆ ಭಾಗವಹಿಸಿದೆ. ಹೋರಾಟಗಾರರು ಸಮಾಜದಲ್ಲಿ ಅನ್ಯಾಯ, ಶೋಷಣೆಗೆ ಒಳಗಾಗಿರುವವರ ಪರ ನಿಲ್ಲಬೇಕು ಎಂದರು.


ನೂತನ ಪದಾಧಿಕಾರಿಗಳು:
ತಾಲೂಕು ಅಧ್ಯಕ್ಷರಾಗಿ ದೇವು ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕೆ.ಜಿ.ಸಂತೋಷ್, ಯುವ ಘಟಕ ಅಧ್ಯಕ್ಷರಾಗಿ ರಾಮಚಂದ್ರು, ಕಾರ್ಯದರ್ಶಿಯಾಗಿ ಚಿನಕುರಳಿ ಪ್ರದೀಪ್, ಜಿಲ್ಲಾ ಸಂಚಾಲಕರಾಗಿ ಆಟೋ ಯೋಗೇಶ್, ಪಟ್ಟಣ ಘಟಕ ಅಧ್ಯಕ್ಷರಾಗಿ ಸತೀಶ್ ಬಾಬು, ಉಪಾಧ್ಯಕ್ಷರಾಗಿ ಅಲೆಕ್ಸಾಂಡರ್, ಕಾರ್ಯದರ್ಶಿಯಾಗಿ ಎ.ಪಿ.ಸತೀಶ್, ಪಟ್ಟಣ ಯುವ ಘಟಕ ಅಧ್ಯಕ್ಷರಾಗಿ ಯುವ, ಉಪಾಧ್ಯಕ್ಷರಾಗಿ ಕಲೀಲ್, ಚಿನಕುರಳಿ ಹೋಬಳಿ ಘಟಕದ ಅಧ್ಯಕ್ಷರಾಗಿ ಗುಣ, ಜಕ್ಕನಹಳ್ಳಿ ಹೋಬಳಿ ಘಟಕದ ಅಧ್ಯಕ್ಷರಾಗಿ ಮೋಹನ್ ಕುಮಾರ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾಗಿ ಹಾರೋಹಳ್ಳಿ ಇಂದ್ರಮ್ಮ, ಕಾರ್ಯದರ್ಶಿಯಾಗಿ ಜಯಶೀಲಾ, ಪಟ್ಟಣ ಘಟಕದ ಮಹಿಳಾ ಅಧ್ಯಕ್ಷರಾಗಿ ನಂದಿನಿ ಆಯ್ಕೆಯಾದರು.


ಸೇನೆಯ ಕಾರ್ಯಾಧ್ಯಕ್ಷ ಮಂಡಿಬೆಟ್ಟಹಳ್ಳಿ ಎಂ.ಎಸ್.ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net