ಬಿಜೆಪಿ ಸರ್ಕಾರದಲ್ಲಿ ಸಮಗ್ರ ಅಭಿವೃದ್ಧಿ, ಕೇಂದ್ರ ಸಚಿವ ಜೋಶಿ ಮೆಚ್ಚುಗೆ

15-SVR-1 - joshi
Published on

ಸವಣೂರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಸಮಗ್ರ ಕರ್ನಾಟಕ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಶನಿವಾರ ಸಂಜೆ ಸವಣೂರಿಗೆ ಭೇಟಿ ನೀಡಿ ಡಾ. ವಿ.ಕೃ. ಗೋಕಾಕ ಅವರ ಕಂಚಿನ ಪುತ್ಥ್ತಗೆ ಮಾಲಾರ್ಪಣೆ, ಸತ್ಯಭೋಧ ಸ್ವಾಮೀಜಿ, ಅಡವಿಸ್ವಾಮಿ ಮಠ ಹಾಗೂ ಕಲ್ಮಠಕ್ಕೆ ಆಗಮಿಸಿ ದೇವರ ದರ್ಶನ ಹಾಗೂ ಆಶೀರ್ವಾದ ಪಡೆದು ಮಾತನಾಡಿದರು.
ಬಿಜೆಪಿ ರಾಜ್ಯ ಮಹಿಳಾ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡ್ರ, ಮಂಡಳ ಅಧ್ಯಕ್ಷ ಹನುಮಂತಗೌಡ ಮುದಿಗೌಡ್ರ, ಸುಭಾಸ ಗಡೆಪ್ಪನವರ, ಗಂಗಾಧರ ಬಾಣದ, ಮಾಂತೇಶ ಹಾವಣಗಿ, ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡಿಗೌಡ್ರ, ಧರೆಯಪ್ಪಗೌಡ ಪಾಟೀಲ, ಗಿರೀಶಗೌಡ ಪಾಟೀಲ, ಶಂಕರ ಪಾಟೀಲ, ಸಿ.ಬಿ. ದುರ್ಗದಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net