ಮುಳ್ಳೂರು ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

7ss1mulluru schl vitarane
Published on

ಶನಿವಾರಸಂತೆ: ನಿಡ್ತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 1988-89ನೇ ಶೈಕ್ಷಣಿಕ ಸಾಲಿನ ಹಳೆಯ ವಿದ್ಯಾರ್ಥಿಗಳು, ಪೂರ್ವ ಸಂಘ, ಕ್ರೀಡಾ ಸಂಘ ಮತ್ತು ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಸಮವಸ್ತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಯಕುಮಾರ್ ಮಾತನಾಡಿ, ನಾವು ವಿದ್ಯಾಭ್ಯಾಸ ಮಾಡಿದ ಶಾಲೆಗಳಿಗೆ ಏನಾದರೂ ಕೊಡುಗೆ ನೀಡಿದರೆ ಮಾತ್ರ ಸಾರ್ಥಕತೆಯಾಗುತ್ತದೆ. ಈ ಮೂಲಕ ನಾವು ಓದಿದ ಶಾಲೆಗೆ ಋಣ ತೀರಿಸುವಂತಾಗುತ್ತದೆ ಎಂದರು.

ನಿಡ್ತ ಗ್ರಾ.ಪಂ.ಅಧ್ಯಕ್ಷ ಅಶೋಕ್ ಗ್ರಾ.ಪಂ.ವತಿಯಿಂದ ಶಾಲೆಗೆ ಲೋಟಗಳನ್ನು ನೀಡುವುದರ ಜತೆಗೆ ಶಾಲಾ ಅಭಿವೃದ್ಧಿಗೆ ಸಹಕಾರ ನೀಡುವುದು ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಸನೀಲ್ ಗೌಡಳ್ಳಿ ಅವರು ಶಾಲಾ ಆವರಣಕ್ಕೆ ಇಂಟರ್‌ಲಾಕ್ ಬ್ರಿಕ್ಸ್ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ವೇದಿಕೆಯಲ್ಲಿ ಪ್ರಮುಖರಾದ ಸುಬ್ಬಪ್ಪ, ನಿವೃತ್ತ ಶಿಕ್ಷಕ ಡಿ.ಬಿ.ಸೋಮಪ್ಪ, ಹಳೆಯ ವಿದ್ಯಾರ್ಥಿಗಳ ಸಂಘದ ಮುರುಗನ್, ರಾಮಕೃಷ್ಣ, ಮಲ್ಲೇಶ್, ರೇಖಾ, ಹೇಮಲತಾ, ಮಣಿ, ಮೋಹನಾಕ್ಷಿ, ಗಣೇಶ್, ಯೋಗೇಶ್, ಮಹೇಶ್, ಶಾಲಾ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್, ಸಹ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net