ಅಡಿಗಳ್ ಟ್ರಸ್ಟ್‌ನಿಂದ ಸಮವಸ್ತ್ರ ವಿತರಣೆ

pdb (1)
Published on

ಪಡುಬಿದ್ರಿ: ನಾವು ಕಲಿತ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವ ಯೋಗ ನಮಗೆ ದೊರಕಿದೆ. ಶಾಲೆಯ ಋಣ ಬಹಳ ದೊಡ್ಡದು. ಈಗ ಈ ಮೂಲಕ ಋಣವನ್ನು ತೀರಿಸುವ ಅವಕಾಶ ದೊರೆತಿದೆ ಎಂದು ಉವಾ ಭಟ್ ಹೇಳಿದರು.

ಪಡುಬಿದ್ರಿ ಶ್ರೀ ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪಡುಬಿದ್ರಿ ಗಣಪತಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅಡಿಗಳ್ ಸುಬ್ರಾಯ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಸಮವಸ್ತ್ರ ವಿತರಿಸಿ ವಾತನಾಡಿದರು.

ಅದವಾರು ಮಠದ ಶಿಕ್ಷಣ ಮಂಡಳಿಯ ಪ್ರತಿನಿಧಿ ಪ್ರೊ.ನಿತ್ಯಾನಂದ, ಹಳೇ ವಿದ್ಯಾರ್ಥಿ ಸಂದ ನಿರ್ದೇಶಕ ಅನಂತಪಟ್ಟಾಭಿ ರಾವ್, ಪಡುಬಿದ್ರಿ ಗಣಪತಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಅನುರಾಧಾ ಪಿ.ಎಸ್. ವಾತನಾಡಿದರು.

ವಾಸುದೇವ ಭಟ್ ಮತ್ತು ರುಕ್ಮಿಣಿ ಭಟ್ ದಂಪತಿಯನ್ನು ಗೌರವಿಸಲಾಯಿತು. ಹಳೇ ವಿದ್ಯಾರ್ಥಿ ಸಂದ ಅಧ್ಯಕ್ಷ ಗಣೇಶ ಕೋಟ್ಯಾನ್, ನವಶಕ್ತಿ ಮಹಿಳಾ ಮಂಡಲದ ಅಧ್ಯಕ್ಷೆ ಸುಧಾ ಆರ್.ನಾವಡ ಉಪಸ್ಥಿತರಿದ್ದರು. ಶಿಕ್ಷಕ ಶ್ರೀಶ ಸ್ವಾಗತಿಸಿದರು. ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಅಶೋಕ ಕೆ. ವಂದಿಸಿದರು. ರಾವೇಂದ್ರ ರಾವ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net