ಜಾನಪದ ಪರಿಷತ್ತಿಗೆ ಯುನೆಸ್ಕೋ ಮಾನ್ಯತೆ

Rmgm-Ph-001-Janapada Loka - UNESCO -Manyathe- Accreditation - News- Photo-29-9-2024
Published on

* ಅಮೂರ್ತ ಸಾಂಸ್ಕೃತಿ  ಪರಂಪರೆಯ ಸಂರಕ್ಷಣೆಯಲ್ಲಿ ಗುರುತು

* ವಿಶ್ವದ 58 ಸಾರ್ವಜನಿಕ ಸೇವಾ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ

ರಾಮನಗರ

ರಾಮನಗರದ ಜಾನಪದ ಲೋಕ ನಿರ್ಮಾಣದ ಕರ್ನಾಟಕ ಜಾನಪದ ಪರಿಷತ್​ಗೆ ಯುನೆಸ್ಕೋ ಮಾನ್ಯತೆ ದೊರೆತಿದೆ.

ನಾಡೋಜ ಎಚ್​.ಎಲ್​. ನಾಗೇಗೌಡ ಅವರಿಂದ ಜಾನಪದವನ್ನೇ ಮೂಲವಾಗಿಸಿಟ್ಟು ಉತ್ತಮ ಪರಿಸರದಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ ಕುಂಭಾಪುರ ಬಳಿಯ ಬೆಂಗಳೂರು&ಮೈಸೂರು ರಸ್ತೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನಿಂದ ಸ್ಥಾಪಿತವಾದ ಜಾನಪದ ಲೋಕ ಇಂದು ರಾಜ್ಯ, ದೇಶದಲ್ಲಿ ಬಹುದೊಡ್ಡಮಟ್ಟದ ಸಾಂಸತಿಕ ಕೇಂದ್ರವಾಗಿ ಬೆಳೆದು ನಿಂತಿದೆ. ಜಾನಪದ ಲೋಕ ಕನ್ನಡ ನಾಡಿನಲ್ಲಷ್ಟೇ ಅಲ್ಲ, ಭಾರತದಲ್ಲಿಯೇ ಅತ್ಯಂತ ಅಪರೂಪದ ವೈಶಿಷ್ಟ್ಯ ಗಳಿಂದ ಕೂಡಿದ ಬೃಹತ್​ ಸಾಂಸತಿಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಂತಹ ಸುಂದರ ಸಾಂಸ್ಕೃತಿಕ ಕೇಂದ್ರದ ರೂವಾರಿ ಕರ್ನಾಟಕ ಜಾನಪದ ಪರಿಷತ್ತಿಗೆ 2024ರ ಜೂನ್​ನಲ್ಲಿ ಯುನೆಸ್ಕೋ ಮುಖ್ಯಾಲಯದಲ್ಲಿ ನಡೆದ ಹತ್ತನೇ ಅಧಿವೇಶನದ ಸಮಯದಲ್ಲಿ ಯುನೆಸ್ಕೋದಿಂದ ಮಾನ್ಯತೆ ಘೋಷಿಸಲಾಗಿದೆ. ವಿಶ್ವದ ವಿವಿಧ ದೇಶಗಳ 58 ಸಾರ್ವಜನಿಕ ಸೇವಾ ಸಂಸ್ಥೆಗಳ ಪೈಕಿ ಜಾನಪದ ಪರಿಷತ್ತು ಒಂದು ಎಂದು ಗುರುತಿಸಿದೆ.

ಮಾನ್ಯತೆಯಿಂದ ಆಗುವ ಲಾಭ:

ದೇಶ, ವಿದೇಶದ ಪ್ರವಾಸಿಗರನ್ನು ಜಾನಪದ ಲೋಕ ಆಕರ್ಷಿಸಲು ಉತ್ತಮ ಅವಕಾಶ ಒದಗಿಸುವ ಜತೆಗೆ ವಿದೇಶಿಗರಿಗೂ ಜಾನಪದ ಸಂಸತಿ ಅರಿಯಲು ಸಹಕಾರಿಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರಿನ ಜತೆಗೆ ವಿಶ್ವಮಟ್ಟದಲ್ಲಿ ಗುರುರತಿಸಲ್ಪಡುತ್ತದೆ. ಜಾಗತಿಕ ಸಂವಾದಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಯುನೆಸ್ಕೋ ಮಾನ್ಯತೆ ಉತ್ತೇಜಿಸುತ್ತದೆ. ಜತೆಗೆ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ಸಮುದಾಯದಲ್ಲಿ ತನ್ನ ಪಾತ್ರವನ್ನು ಹೆಚ್ಚಿಸಿಕೊಂಡಿದೆ.

ಸಂಸ್ಕೃತಿ ಕಣಜ

ಹಿಂದಿನ ಕಾಲದಲ್ಲಿ ಜನರು ಬಳಸುತ್ತಿದ್ದ ವಸ್ತುಗಳು, ಜನಪದ ಕಲಾ ಪ್ರಕಾರಗಳ ಚಿತ್ರಗಳು, ರಾಜ ಮಹಾರಾಜರು ಬಳಸುತ್ತಿದ್ದ ಆಯುಧಗಳು ವಸ್ತು ಸಂಗ್ರಹಾಲಯಗಳು, ಹೊಸದಾಗಿ ಸ್ಥಾಪಿತವಾದ ಗಿರಿಜನರ ಹಾಡಿ, ಅವರ ಬದುಕಿನ ಚಿತ್ರಣದ ಮಾಹಿತಿ, ಉತ್ತಮ ಕಲಾಕೃತಿಗಳು, ಜನಪದ ಕಲೆಗಾರರ ವೇಷ&ಭೂಷಣ, ಸಂಸತಿಯ ಅನಾವರಣ, ಪುಸ್ತಕಗಳು, ಗೀತ ಸಾಹಿತ್ಯ ಸುಂದರ ಪರಿಸರ ಹೀಗೆ ಹತ್ತು ಹಲವು ವೈಶಿಷ್ಟ$್ಯಗಳು ಜಾನಪದ ಲೋಕದಲ್ಲಿದ್ದು ಸಾಂಸತಿಕ ಕೇಂದ್ರವಾಗಿ ಜನಪದದ ಸಂಸತಿ ಕಣಜವಾಗಿದೆ.

ಯುನೆಸ್ಕೋ ಮಾನ್ಯತೆ ನಾಡೋಜ ಎಚ್​. ಎಲ್​. ನಾಗೇಗೌಡರ ಜಾನಪದ ಕಳಕಳಿಗೆ ಗೌರವ ತಂದುಕೊಟ್ಟಿದೆ. ಕರ್ನಾಟಕದ ಜಾನಪದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಸಂವರ್ಧನೆ ಮತ್ತು ಪ್ರಸಾರ, ಪ್ರಚಾರ, ದಾಖಲಾತಿಗಳ ಕಾರ್ಯದ ನಿರಂತರ ಪ್ರಯತ್ನಗಳಿಗೆ ಸಾಯಾಗಿದೆ.

ಪ್ರೊ.ಹಿ.ಚಿ. ಬೋರಲಿಂಗಯ್ಯ

ಅಧ್ಯಕ್ಷ, ಕರ್ನಾಟಕ ಜಾನಪದ ಪರಿಷತ್ತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net