ದಾಖಲೆಯಿಲ್ಲದೆ ಸಾಗಿಸುತ್ತಿದ್ದ 2.95 ಲಕ್ಷ ರೂ. ವಶ

27 AKR 01
Published on

ಅಕ್ಕಿಆಲೂರ: ದಾಖಲೆಯಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 2.95 ಲಕ್ಷ ರೂಪಾಯಿಯನ್ನು ಸಮೀಪದ ಗೊಂದಿ ಗ್ರಾಮದ ಚೆಕ್​ಪೋಸ್ಟ್​ನಲ್ಲಿ ಪೊಲೀಸರು ಭಾನುವಾರ ತಡರಾತ್ರಿ ವಶಪಡಿಸಿಕೊಂಡಿದ್ದು, ಮೂವರ ಮೇಲೆ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆ ಸೋಮನಕೊಪ್ಪ ಗ್ರಾಮದ ಸೈಯದ್ ಅಮೀರ್ ಜಾನ್, ನೀಯಾಮ್ ದಸ್ತಗಿರಿ ಬೇಗ ಮತ್ತು ನಯಾಜ್ ಇಂತಿಯಾಜ್ ಶರೀಫ ಅವರು ಕಾರಿನಲ್ಲಿ 2.95 ಲಕ್ಷ ರೂ. ನಗದು ಇಟ್ಟುಕೊಂಡು ಮಹಾರಾಷ್ಟ್ರದ ನೇಸರಿಗೆ ತೆರಳುತ್ತಿದ್ದರು. ಹಾವೇರಿ ಮತ್ತು ಶಿವಮೊಗ್ಗ ಗಡಿಗ್ರಾಮ ಗೊಂದಿಯ ಚೆಕ್​ಪೋಸ್ಟ್​ನಲ್ಲಿ ಕಾರು ತಪಾಸಣೆ ನಡೆಸಿದ ಪೊಲೀಸರಿಗೆ ದಾಖಲೆ ಇಲ್ಲದ ಹಣ ದೊರೆತಿದೆ. 2.95 ಲಕ್ಷ ರೂ. ವಶಕ್ಕೆ ಪಡೆದ ಪೊಲೀಸರು, ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್​ಐ ಗಡ್ಡಪ್ಪ ಗುಂಜಟಗಿ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net