

ಕೊಟ್ಟೂರು: ಕೊಟ್ಟೂರೇಶ್ವರ ಸ್ವಾಮಿ ಜಾತ್ರೋತ್ಸವ ಪೂರ್ಣಗೊಂಡು 8 ದಿನಗಳಾದರೂ ರಸ್ತೆಯಲ್ಲಿ ತ್ಯಾಜ್ಯ ಸ್ವಚ್ಛಗೊಳಿಸಿಲ್ಲ.
ಇದನ್ನೂ ಓದಿ:ರಸ್ತೆ ಪಕ್ಕ ತ್ಯಾಜ್ಯಕ್ಕೆ ಕಡಿವಾಣ ಯಾವಾಗ?
ಕಾಲ್ನಡಿಗೆಯಲ್ಲಿ ಬಂದ ಭಕ್ತರ ದಾಹ ತಣಿಸಲು ನೀಡಲಾಗಿದ್ದ ನೀರಿನ ಬಾಟಲ್, ಎಳನೀರು, ಉಪಹಾರದ ತಟ್ಟೆಗಳು ಹಾಗೂ ಪ್ಲಾಸ್ಟಿಕ್ ಕವರ್ ಎಲ್ಲೆಂದರಲ್ಲಿ ಬಿದ್ದಿವೆ. ಪೌರಕಾರ್ಮಿಕರು ಸ್ವಚ್ಛಗೊಳಿಸಿದ್ದರೂ ಪೂರ್ಣಪ್ರಮಾಣದಲ್ಲಿ ತ್ಯಾಜ್ಯ ವಿಲೇವಾರಿಯಾಗಿಲ್ಲ. ಪ್ಲಾಸ್ಟಿಕ್ ಕವರ್ ಹೊಲಗಳಲ್ಲಿ ಬಿದ್ದಿವೆ. ಇದರಿಂದ ಕೃಷಿ ಭೂಮಿ ಮಲೀನವಾಗುತ್ತದೆ. ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.