ಮುತ್ತಪ್ಪ ರೈ ಆಸ್ತಿಯಲ್ಲಿ 2ನೇ ಪತ್ನಿಗೆ ಏನೇನು ಸಿಕ್ತು? ಆರಂಭವಾಗಲಿದೆಯಾ ಆಸ್ತಿ ವಿವಾದ?

Muttappa Rai Feature
Published on

ಬೆಂಗಳೂರು: ಕ್ಯಾನ್ಸರ್​ನಿಂದ ಮೃತಪಟ್ಟ ಮಾಜಿ ಭೂಗತ ದೊರೆ ಹಾಗೂ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಅವರು ತಮ್ಮ ವಿಲ್​ ಪತ್ರದಲ್ಲಿ ಮಕ್ಕಳಿಬ್ಬರು ಸೇರಿದಂತೆ ಸಂಬಂಧಿಕರಿಗಾಗಿ ಮಾತ್ರ ಆಸ್ತಿ ಹಂಚಿಕೆ ಮಾಡದೆ ಮನೆಗೆಲಸದವರ ಬಾಳಿಗೂ ನೆರವಾಗಿದ್ದಾರೆ. ಇದರೊಂದಿಗೆ ಎರಡನೇ ಪತ್ನಿಗೂ ಆಸ್ತಿ ನೀಡಿದ್ದು, ಭವಿಷ್ಯದಲ್ಲಿ ಮಕ್ಕಳು ಮತ್ತು ಎರಡನೇ ಪತ್ನಿ ನಡುವೆ ಆಸ್ತಿ ವಿವಾದ ಬರದಂತೆ ಎಚ್ಚರಿಕೆ ವಹಿಸಿದ್ದಾರೆ.

ರೈ ಅವರು ಸುಮಾರು 41 ಪುಟಗಳ ವಿಲ್​ ಬರೆದಿದ್ದು, ಅವರ ಹೆಸರಿನಲ್ಲಿ ಸುಮಾರು 1500-2000 ಕೋಟಿ ರೂ. ಆಸ್ತಿ ಇದೆ. 15 ವರ್ಷಗಳಿಂದ ಮನೆಗೆಲಸ ಮಾಡಿರುವ ನಂಬಿಕಸ್ಥ 25 ಕೆಲಸಗಾರರ ಹೆಸರನ್ನು ವಿಲ್​ನಲ್ಲಿ ಉಲ್ಲೇಖ ಮಾಡಿದ್ದಾರೆಂದು ರೈ ವಕೀಲರಾದ ನಾರಾಯಣ ಸ್ವಾಮಿ ಅವರು ದಿಗ್ವಿಜಯ ನ್ಯೂಸ್​ಗೆ ತಿಳಿಸಿದ್ದಾರೆ.

ಮುತ್ತಪ್ಪ ರೈ ಅವರು ಎರಡನೇ ಪತ್ನಿ ಅನುರಾಧ ಅವರಿಗೂ ಆಸ್ತಿ ನೀಡಿದ್ದು, ಎಚ್.​ಡಿ. ಕೋಟೆಯಲ್ಲಿರೋ ಪ್ರಾಪರ್ಟಿ, ಚಿನ್ನಾಭರಣ, ಐಷಾರಾಮಿ ಕಾರು, ಕೊಟ್ಯಾಂತರ ರೂಪಾಯಿ ಹಣವನ್ನು ಅನುರಾಧ ಹೆಸರಿಗೆ ಮಾಡಿದ್ದಾರೆ. ಅಲ್ಲದೆ, ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡ ಕಟ್ಟಿಸಿಕೊಟ್ಟಿರೋ ಮುತ್ತಪ್ಪ ರೈ, ಅನುರಾದ ಜತೆಗಿದ್ದ ಟೈಂನಲ್ಲಿಯೇ ಅವರಿಗೆ ಸೇರಬೇಕಾದ್ದನ್ನು ವಿಲ್​ನಲ್ಲಿ ಉಲ್ಲೇಖ ಮಾಡಿದ್ದಾರೆ.

ಅನುರಾದಗೂ ಮುತ್ತಪ್ಪ ರೈ ಮಕ್ಕಳಿಗೂ‌ ಯಾವುದೇ ಬಿಕ್ಕಟ್ಟು ಇಲ್ಲ. ಈಗಲೂ ಎಲ್ಲರೂ ಚೆನ್ನಾಗಿದ್ದಾರೆ ಮುಂದೆಯೂ ಚೆನ್ನಾಗಿ ಇರ್ತಾರೆ. ಆಸ್ತಿ ವಿಚಾರವಾಗಿ ಅನುರಾದ ರೈ ಕೇಸ್ ಹಾಕ್ತಾರೆ ಅನ್ನೋದೆಲ್ಲ ಸುಳ್ಳು ಎಂದು ಮುತ್ತಪ್ಪ ರೈ ಅಡ್ವೋಕೇಟ್ ನಾರಾಯಣಸ್ವಾಮಿ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net