

ಪೂರ್ವಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠದಿಂದಾಗುವ ಕಿರಿಕಿರಿ ಬಗ್ಗೆ ವಿಜಯವಾಣಿ ಆರಂಭಿಸಿರುವ ಅಭಿಯಾನಕ್ಕೆ ಶಿಕ್ಷಣ ತಜ್ಞರು, ಪಾಲಕರು ಹಾಗೂ ಪ್ರಜ್ಞಾವಂತ ನಾಗರಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯದ ಮೂಲೆಮೂಲೆಗಳಿಂದ ಇ ಮೇಲ್ ಮುಖಾಂತರ ಸಾವಿರಾರು ಜನರಿಂದ ಪ್ರತಿಕ್ರಿಯೆಗಳು ಹರಿದುಬಂದಿವೆ. ಯಾವುದೇ ಕಾರಣಕ್ಕೂ ಆನ್ಲೈನ್ ತರಗತಿಗಳು ಬೇಡವೇ ಬೇಡ ಎಂದು ಖಾಸಗಿ ಶಾಲೆಗಳು ಹಾಗೂ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಮಕ್ಕಳ ಕೈಗೆ
ಮೊಬೈಲ್ ಗೀಳು ಆನ್ಲೈನ್ ಶಿಕ್ಷಣ ಎಂದಾದ ಮೇಲೆ ಈ ವೇಳೆ ಪಾಲಕರು ಅನಿವಾರ್ಯವಾಗಿ ಮಕ್ಕಳಿಗೆ ಮೊಬೈಲ್ ನೀಡಬೇಕು. ಪ್ರಾಥಮಿಕ ಹಂತದಲ್ಲಿ ನಾವೇ ಮಕ್ಕಳಿಗೆ ಮೊಬೈಲ್ ಗೀಳು ಅಂಟಿಕೊಳ್ಳಲು ಕಾರಣರಾಗುತ್ತೇವೆ. ಇದು ಆತಂಕದ ವಿಷಯ ಎಂದಿದ್ದಾರೆ ಶಿಕ್ಷಣ ತಜ್ಞರು.
3 ತಿಂಗಳವರೆಗೆ ಶಾಲೆ ತೆರೆಯಬೇಡಿ
ಪ್ರಾಥಮಿಕಕ್ಕೆ ಬೇಡ
ಆಟವಾಡಬೇಕಾದ ಮಕ್ಕಳು ಮೊಬೈಲ್ ಮುಂದೆ ಕುಳಿತು ಪಾಠ ಕೇಳುವ ಪರಿಪಾಠವನ್ನು ನಾವೇ ಬೆಳೆಸುವುದು ಸರಿಯಾದ ಕ್ರಮವಲ್ಲ. ಮಕ್ಕಳಲ್ಲಿ ದೃಷ್ಟಿದೌರ್ಬಲ್ಯ ಹೆಚ್ಚಾಗುತ್ತಿದ್ದು, ಸಣ್ಣವಯಸ್ಸಿಗೆ ಕನ್ನಡಕ ಹಾಕಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಇನ್ನು ಆನ್ಲೈನ್ ತರಗತಿ ಎಂದರೆ, ದೃಷ್ಟಿದೌರ್ಬಲ್ಯ ಮತ್ತಷ್ಟು ಕಾಡುವುದರಲ್ಲಿ ಅನುಮಾನವೇ ಇಲ್ಲ. ಆನ್ಲೈನ್ ಮಾಡಲೇ ಬೇಕು ಎಂದಾದರೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜನೆ ಮಾಡಿ. ಪ್ರಾಥಮಿಕ ಶಿಕ್ಷಣಕ್ಕಂತೂ ಬೇಡವೇ ಬೇಡ ಎಂದು ಹಲವು ಪಾಲಕರು ಒತ್ತಾಯಿಸಿದ್ದಾರೆ.
ಸರ್ಕಾರವೇಕೆ ಮೌನ?
ರಾಜ್ಯದಲ್ಲಿರುವ ಬಹುತೇಕ ಖಾಸಗಿ ಶಾಲೆಗಳು ಆನ್ಲೈನ್ ತರಗತಿ ತೆಗೆದುಕೊಳ್ಳುತ್ತಿವೆ. ಇದು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಸಂಕಷ್ಟ ತಂದೊಡ್ಡಿದೆ. ಆದರೂ, ಶಿಕ್ಷಣ ಇಲಾಖೆ ಮಾತ್ರ ಈ ಬಗ್ಗೆ ಏಕೆ ಮೌನವಹಿಸಿದೆ? ಆನ್ಲೈನ್ ತರಗತಿ ಆಯೋಜನೆ ಮಾಡುವ ಕುರಿತು ಮಾರ್ಗಸೂಚಿಗಳನ್ನು ಹೊರಡಿ ಸುವಂತೆ ಶಿಕ್ಷಣ ಸಚಿವರು ಕಳೆದ ತಿಂಗಳೇ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದರೂ ಇಲಾಖೆ ಮಾತ್ರ ಈ ಬಗ್ಗೆ ನಿಯಮಗಳನ್ನು ರೂಪಿಸದಿರುವುದು ಏಕೆ? ಎಂದು ಪಾಲಕರು ಪ್ರಶ್ನಿಸಿದ್ದಾರೆ.
| ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ
ಕರೊನಾ ಸಂದರ್ಭದಲ್ಲಿ ಶಾಲೆ ತೆರೆಯುವ ವಿಚಾರವಾಗಿ ಶಿಕ್ಷಣ ಸಚಿವ ಸುರೇಶಕುಮಾರ್ ಕರೆ ಮಾಡಿದ್ದರು, ಪತ್ರ ಬರೆದಿದ್ದಾರೆ. ಪ್ರತಿ ಪಾಲಕರಿಗೂ ಅವರ ಮಕ್ಕಳ ವಿಚಾರವಾಗಿ ಆತಂಕವಿರುತ್ತದೆ. ಶಿಕ್ಷಣ ಸಂಸ್ಥೆಗಳೂ ಪಾಠದ ಬಗ್ಗೆ ಜವಾಬ್ದಾರಿ ಹೊಂದಿವೆ. ಪಾಲಕರ ಜತೆ ರ್ಚಚಿಸಿ ಎಂದಿದ್ದೇನೆ. ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಇಚ್ಛಿಸುವುದಿಲ್ಲ.
| ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಲ್ಯಾಪ್ಟಾಪ್ಗಾಗಿ ಕಳ್ಳತನ ಮಾಡಿ ಅಂದ್ರು!
ಆನ್ಲೈನ್ ತರಗತಿಗಳ ಕಾಟ ಹೆಚ್ಚಾಗುತ್ತಿದ್ದು, ‘ಕಳ್ಳತನ ಮಾಡಿಯಾದ್ರೂ ಅಥವಾ ಭಿಕ್ಷೆ ಬೇಡಿಯಾದ್ರೂ ಲ್ಯಾಪ್ಟಾಪ್ ತೆಗೆದುಕೊಳ್ಳುವಂತೆ ಖಾಸಗಿ ಕಾಲೇಜಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಹೇಳಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ‘ಊಟ-ತಿಂಡಿಗೆ ಖರ್ಚು ಮಾಡೋಕೆ ಆಗುತ್ತೆ. ಲ್ಯಾಪ್ಟಾಪ್ ತಗೋಳೋಕೆ ಏನ್ ಪ್ರಾಬ್ಲಂ?’ ಎಂದು ಬೆಂಗಳೂರಿನ ಎಂವಿಜೆ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆ ಕಾಲೇಜಿನ ಮುಖ್ಯಸ್ಥ ಪ್ರೊ.ಮುರಳೀಧರ್ ಕೊಟ್ಟಿರುವ ಖಡಕ್ ಸೂಚನೆಗೆ ವಿದ್ಯಾರ್ಥಿಗಳು ತಬ್ಬಿಬ್ಬಾಗಿದ್ದಾರೆ. ಮುಂದಿನ ವಾರದಲ್ಲಿ ಇಂಟರ್ನಲ್ ಪರೀಕ್ಷೆ ಇದ್ದು, ಈ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲು ವಿಡಿಯೋ ಕಾಲ್ ಮಾಡಿದಾಗ ಈ ರೀತಿ ಮಾತನಾಡಿದ್ದಾರೆ. ಆನ್ಲೈನ್ನಲ್ಲಿ ಇಂಟರ್ನಲ್ ಪರೀಕ್ಷೆ ಮಾಡುವುದು ಬೇಡ. ಎಲ್ಲರೂ ಲ್ಯಾಪ್ಟಾಪ್ ಖರೀದಿ ಮಾಡುವುದು ಕಷ್ಟ. ಪರೀಕ್ಷೆ ಮುಂದೂಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.
ಓದುಗರ ದನಿ