ಸೌಲಭ್ಯವಂಚಿತ ಮಡಿವಾಳ ಜನಾಂಗ

ಸೌಲಭ್ಯವಂಚಿತ ಮಡಿವಾಳ ಜನಾಂಗ
Published on

ವಿರಾಜಪೇಟೆ: ಮಡಿವಾಳ ಜನಾಂಗವು ಬೇರೆ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ್ದು, ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ. ಇದರಿಂದ ಸಮುದಾಯದವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ ಎಂದು ಹಿರಿಯ ವಕೀಲ ಹಾಗೂ ಕೆ.ಆರ್.ನಗರದ ಮಾಚಿದೇವ ಸಂಘದ ಅಧ್ಯಕ್ಷ ಕುಮಾರ್ ಹೇಳಿದರು.

ವಿರಾಜಪೇಟೆ ವೀರ ಮಡಿವಾಳ ಮಾಚಿದೇವ ಸಂಘದ ವತಿಯಿಂದ ಇತ್ತೀಚೆಗೆ ವಿರಾಜಪೇಟೆ ಪುರಭವನದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಡಿವಾಳರು ಬಟ್ಟೆಗಳನ್ನು ಮಾತ್ರ ಶುದ್ಧ ಮಾಡುವ ಕಾಯಕದಲ್ಲಿ ತೊಡಗಬಾರದು, ನಾವು ವೀರಭದ್ರನ ವಂಶದವರು. ನಮ್ಮ ಜನಾಂಗದ ಸದಸ್ಯರು ರಾಜ್ಯದಲ್ಲಿ ಹದಿನೈದು ಲಕ್ಷ ಜನ ಇದ್ದಾರೆ. ನಮ್ಮ ಜನಾಂಗದ ಸಮಸ್ಯೆಯನ್ನು ಬಗೆಹರಿಸಲು ರಾಜ್ಯದಲ್ಲಿ ಒಬ್ಬರಾದರೂ ಶಾಸಕರಾಗಿ ಆಯ್ಕೆಯಾಗಬೇಕೆಂದರು. ಜನಾಂಗದವರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವಂತೆ ಸಲಹೆ ನೀಡಿದರು.

ವಿರಾಜಪೇಟೆ ಪುರಸಭೆ ಸದಸ್ಯ ಡಿ.ರಾಜೇಶ್ ಪದ್ಮನಾಭ ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮ ಜನಾಂಗದ ಎಲ್ಲರನ್ನು ಒಟ್ಟುಗೂಡಿಸಿ ಒಳ್ಳೆಯ ಕಾರ್ಯಕ್ರಮ ಮಾಡಲಾಗತ್ತದೆ. ಜನಾಂಗದ ಎಲ್ಲ ಸದಸ್ಯರು ಉತ್ತಮ ರೀತಿಯಲ್ಲಿ ಸ್ಪಂದಿಸುವ ಮನಸ್ಸು ಮಾಡಬೇಕು ಎಂದರು.

ಹುಣಸೂರು ಸಂಘದ ಅಧ್ಯಕ್ಷ ಶಂಕರ, ಚಂದ್ರ, ನಾಡಕ ರತ್ನಚಂದ್ರ ಮಾಸ್ಟರ್, ದೇವಮ್ಮ, ಎ.ವಿ.ಮಾದಪ್ಪ, ಪುಟ್ಟಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net