ನೆಕ್ಕಿಲಾಡಿಯ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ಅಸಾಧ್ಯ

Upp_Nekkiladi
Published on

ಉಪ್ಪಿನಂಗಡಿ: ಚತುಷ್ಪಥ ಹೆದ್ದಾರಿಯ 34ನೇ ನೆಕ್ಕಿಲಾಡಿಯ ಜಂಕ್ಷನ್ ಪ್ರದೇಶದಲ್ಲಿ ಅಂಡರ್‌ಪಾಸ್ ರಚಿಸಬೇಕೆಂದು ಮಾಜಿ ಶಾಸಕ ಸಂಜೀವ ಮಠಂದೂರು ಹೆದ್ದಾರಿ ಇಲಾಖಾಧಿಕಾರಿಗಳಿಗೆ ವಿನಂತಿಸಿದ್ದು, ಕೊನೇ ಹಂತದಲ್ಲಿ ಅಂಡರ್‌ಪಾಸ್ ನಿರ್ಮಾಣ ಅಸಾಧ್ಯ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹೆದ್ದಾರಿ ಇಲಾಖೆ ಅನುಮೋದಿಸಿದ ಯೋಜನಾ ನಕ್ಷೆಯಂತೆ ಕಾಮಗಾರಿ ನಡೆಸಲಾಗುತ್ತಿದೆ. ಮೇಲಿಂದಲೇ ಯೋಜನೆಯ ಪರಿಷ್ಕರಣೆ ಮಾಡಿದರೆ ಅಂಡರ್‌ಪಾಸ್ ನಿರ್ಮಿಸಬಹುದು. ಅದರ ಹೊರತಾಗಿ ಅಂಡರ್‌ಪಾಸ್ ನಿರ್ಮಾಣ ಅಸಾಧ್ಯ. ಹೆದ್ದಾರಿ ಅಗಲೀಕರಣದ ಕಾಮಗಾರಿ ಕೊನೇ ಹಂತ ಪ್ರವೇಶಿಸಿದಾಗ ಹೊಸ-ಹೊಸ ಬೇಡಿಕೆ ಮುಂದಿರಿಸಿದರೆ ಅದನ್ನು ಅನುಷ್ಠಾನಿಸಲು ಕಷ್ಟಸಾಧ್ಯ ಎಂದು ಕೆಎನ್‌ಆರ್ ಸಂಸ್ಥೆಯ ಇಂಜಿನಿಯರ್ ರಘುನಾಥ ರೆಡ್ಡಿ, ಹೆದ್ದಾರಿ ಇಲಾಖೆಯ ಇಂಜಿನಿಯರ್ ವಿವೇಕಾನಂದ ಚಲಪತಿ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net