

ಚನ್ನಪಟ್ಟಣ: ಆಡಳಿತ ಯಂತ್ರದ ಕಣ್ಣು ತಪ್ಪಿಸಿ, ತಾಲೂಕಿನ ಹಲವೆಡೆ ಮಣ್ಣು ಮಾಫಿಯಾ ಸದ್ದಿಲ್ಲದೇ ನಡೆಯುತ್ತಿದ್ದು, ಕೆರೆ ಸೇರಿ ಸರ್ಕಾರಿ ಜಾಗಗಳಲ್ಲಿನ ಮಣ್ಣನ್ನು ಎತ್ತುವ ಅಕ್ರಮ ದಂಧೆ ರಾಜಾರೋಷ ನಡೆಯುತ್ತಿದೆ.
ಮರಳು ಮಾಫಿಯಾದಂತೆ ಮಣ್ಣು ಮಾಫಿಯಾಯೂ ಹಲವು ವರ್ಷಗಳಿಂದ ತಾಲೂಕಿನಲ್ಲಿ ವ್ಯಾಪಕವಾಗಿದೆ. ಕೆಲವರ್ಷಗಳಿಂದ ಬಿಗಿಯಾದ ಕಾನೂನು ಕ್ರಮಗಳಿಂದ ಈ ಎರಡೂ ಮಾಫಿಯಾಗಳು ಕೊಂಚ ತಹಬದಿಗೆ ಬಂದಿವೆ ಎನ್ನುವ ಮಧ್ಯೆಯೂ ಕೆಲವೆಡೆ ಹಾಡಹಗಲೇ ಭೂಗರ್ಭವನ್ನು ಬರಿದು ಮಾಡುವ ಕೃತ್ಯ ಎಗ್ಗಿಲ್ಲದೆ ಸಾಗಿದೆ.
ಲೂಟಿ.., ಲೂಟಿ!!: ಬರಿದಾಗಿರುವ ಕೆರೆ, ಕಟ್ಟೆ ಹಾಗೂ ಗೋಮಾಳ ಅಥವಾ ರ್ನಿಜನ ಅರಣ್ಯಪ್ರದೇಶ ಮಣ್ಣು ಮಾಫಿಯಾದವರ ಪ್ರಿಯವಾದ ಸ್ಥಳಗಳಾಗಿವೆ. ಯಾವುದೇ ಪರವಾನಗಿ ಇಲ್ಲದೇ(ಇದ್ದರೂ ನಿಯಮಮೀರಿ) ಮಣ್ಣು ಲೂಟಿ ಮಾಡುವುದು ನಡೆಯುತ್ತಿದೆ. ಜೆಸಿಬಿ, ಇಟಾಚಿ ಮೂಲಕ ಟ್ರಾ$್ಯಕ್ಟರ್ ಅಥವಾ ಟಿಪ್ಪರ್ಗೆ ಮಣ್ಣು ತುಂಬಿಸಿ ಸಾಗಾಟ ಮಾಡಲಾಗುತ್ತಿದೆ. ಕೆಲ ವ್ಯಕ್ತಿಗಳು ಲೋಡ್ಗಿಷ್ಟು ಎಂದು ಹಣ ನಿಗದಿ ಮಾಡಿಕೊಂಡು, ಖಾಸಗಿ ಲೇಔಟ್, ತೋಟಗಳಿಗೆ ಮಣ್ಣು ಮಾರುತ್ತಿದ್ದಾರೆ. ಇನ್ನೂ ಕೆಲವರು ಯಂತ್ರಗಳನ್ನು ಬಾಡಿಗೆಗೆ ಪಡೆದು ಅವಶ್ಯಕವಿರುವಷ್ಟು ಮಣ್ಣನ್ನು ಬಾಚುತ್ತಿದ್ದಾರೆ. ಕೆಲವರು ನಾಮಾಕೇವಾಸ್ತೆ ಪರವಾನಗಿ ಪಡೆದು ಲೋಡ್ ಗಟ್ಟಲೇ ಲೂಟಿ ಮಾಡುವ ಮೂಲಕ ಭೂಗರ್ಭ ಬಗೆಯುತ್ತಿದ್ದಾರೆ.
ನಿಯಮಗಳಿದ್ದರೂ ಪಾಲನೆ ನೆಪಥ್ಯ: ಕೆರೆಗಳಲ್ಲಿ ಹೂಳು ಎತ್ತಲು ಸರ್ಕಾರದಲ್ಲಿ ಪರವಾನಗಿ ಇದೆ. ಆದರೆ, ಅದಕ್ಕೆ ಅದರದೇ ಆದ ನಿಯಮಗಳಿವೆ. ಇನ್ನು ಗೋಮಾಳ ಅಥವಾ ಅರಣ್ಯಪ್ರದೇಶದಲ್ಲಿ ಮಣ್ಣು ಎತ್ತಲು ಸುತರಾಂ ಅವಕಾಶವಿಲ್ಲ. ಕಂದಾಯ ಇಲಾಖೆ ನಿಯಮಗಳ ಪ್ರಕಾರ, ಕೆರೆಗಳಲ್ಲಿ 4 ಅಡಿಗಿಂತಲೂ ಹೆಚ್ಚು ಆಳವಾಗಿ ಹಾಗೂ ನೇರವಾಗಿ ಮಣ್ಣು ತೆಗೆಯುವಂತಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಅನುಮತಿ ಹಾಗೂ ಪರವಾನಗಿ ಪಡೆಯದೆ ಮಣ್ಣು ತೆಗೆಯುವಂತಿಲ್ಲ. ಜೆಸಿಬಿಯಂತಹ ಭಾರಿ ಯಂತ್ರಗಳನ್ನು ಕೆರೆಗಳಿಗೆ ಇಳಿಸುವಂತಿಲ್ಲ. ಇಷ್ಟೆಲ್ಲ ನಿಯಮಗಳಿದ್ದರೂ ಕೆಲ ಪ್ರಭಾವಿಗಳಿಂದ ಅವ್ಯಾಹತವಾಗಿ ಮಣ್ಣು ದಂಧೆ ನಡೆಯುತ್ತಿದೆ. ಸಣ್ಣಪುಟ್ಟ ಅಧಿಕಾರಿಗಳು ಈ ವಿಚಾರದ ಬಗ್ಗೆ ಚಕಾರ ಎತ್ತಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.
ಹಾರೋಕೊಪ್ಪ ಕೆರೆಯಲ್ಲಿ ಮಣ್ಣು ಸಾಗಾಟ!ತಾಲೂಕಿನ ಹಾರೋಕೊಪ್ಪದ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಗಣಿ ಮತ್ತು ಭೂ ವಿಾನ ಇಲಾಖೆಯ ಅಧಿಕಾರಿ ನಂದಿನಿ, ವಾಹನಗಳ ಮಾಲೀಕರಿಗೆ 50 ಸಾವಿರ ರೂ. ದಂಡ ವಿಧಿಸಿದ್ದಾರೆ. ಪ್ರಕರಣ ತಾಲೂಕಿನಲ್ಲಿ ನಡೆಯುತ್ತಿರುವ ಮಣ್ಣು ಮಾಫಿಯಾಕ್ಕೆ ತಾಜಾ ಉದಾಹರಣೆ. ಕೆರೆಯಲ್ಲಿ ನರೇಗಾ ಕಾಮಗಾರಿ ಹೆಸರಿನಲ್ಲಿ ಮಣ್ಣು ಎತ್ತಲಾಗುತ್ತಿದ್ದು, ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮಣ್ಣು ತೆಗೆಯಲಾಗುತಿತ್ತು ಎನ್ನಲಾಗಿದೆ. ಮಾಹಿತಿ ತಿಳಿದ ತಣ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ ಪರವಾನಗಿ ಇಲ್ಲದ ಹಿನ್ನೆಲೆಯಲ್ಲಿ ಸಂಬಂಧಿಸಿದವರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಕೆ ರವಾನಿಸಿದ್ದಾರೆ.
ಹಾರೋಕೊಪ್ಪ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ ಪರಿಶೀಲನೆ ನಡೆಸಿದ್ದಾಗ ಯಾವುದೇ ಪರವಾನಗಿ ಇಲ್ಲದ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಗೆ ದಂಡ ವಿಧಿಸಿದ್ದೇವೆ. ಅಕ್ರಮವಾಗಿ ಮಣ್ಣು ಅಥವಾ ಮರಳು ಚಟುವಟಿಕೆಗಳು ಕಂಡುಬಂದರೇ ಮುಲಾಜಿಲ್ಲದೆ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಾಗುವುದು. > ನಂದಿನಿ ಭೂ ವಿಾನಿ ಗಣಿ ಮತ್ತು ಭೂವಿಾನ ಇಲಾಖೆ ರಾಮನಗರ