ಅನಧಿಕೃತ ಅರ್ಚಕನಿಗೆ ಸೇವೆಯಿಂದ ಬಿಡುಗಡೆ

Published on

ಚಿಂತಾಮಣಿ: ತಾಲೂಕಿನ ಆಲಂಬಗಿರಿ ಶ್ರೀವೆಂಕಟರಮಣ ಸ್ವಾಮಿ ಸಮೂಹ ದೇವಾಲಯಗಳಲ್ಲಿ 20 ವರ್ಷಗಳಿಂದ ಅನಧಿಕೃತವಾಗಿ ಬಿಡಾರ ಹೂಡಿದ್ದ ಅರ್ಚಕ ಆರ್​.ಲ್ಮ ನಾರಾಯಣಾಚಾರ್​ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

ಲೋಕಾಯುಕ್ತ, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಹಸೀಲ್ದಾರ್​ ಈ ಆದೇಶ ಹೊರಡಿಸಿದ್ದಾರೆ. ಅನಧಿಕೃತವಾಗಿ ಅರ್ಚಕರು ಮತ್ತು ತಾತ್ಕಾಲಿಕ ಸಿಬ್ಬಂದಿ ಸರ್ಕಾರಿ ನಿಯಮ ಉಲ್ಲಂಸಿ ದೇವಾಲಯದ ಹೂವಿನ ತೋಟದಲ್ಲಿ ನಿರ್ಮಾಣ ಮಾಡಿ ಕೊಂಡಿರುವ ಅನಧಿಕೃತ ವಾಸದ ಮನೆಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ.20 ವರ್ಷಗಳಿಂದ ದೇವಾಲಯದಲ್ಲಿ ವಸೂಲಾಗಿರುವ ವಿವಿಧ ಸೇವೆಗಳ ಹಣವು ದುರುಪಯೋಗವಾಗಿದ್ದು, ಸಂಬಂಧಪಟ್ಟ ಬಿಲ್​ ಕಲೆಕ್ಟರ್​ ಮತ್ತು ಕಚೇರಿ ಸಹಾಯಕರನ್ನು ಕೆಲಸದಿಂದ ವಜಾಗೊಳಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ಎಸ್​.ಸುಬ್ರಮಣ್ಯಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net