

ಚಿಂತಾಮಣಿ: ತಾಲೂಕಿನ ಬಟ್ಲಹಳ್ಳಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್‌ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ನೇತೃತ್ವದ ತಂಡ ಶನಿವಾರ ಬೀಗ ಹಾಕಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತಂಡ ಗ್ರಾಮದಲ್ಲಿ ಬಿ.ನಾರಾಯಣರೆಡ್ಡಿ ಎಂಬುವರು ವಿದ್ಯಾರ್ಹತೆ ಇಲ್ಲದೆ ಹಾಗೂ ಕೆಪಿಎಂಇಯಲ್ಲಿ ನೋಂದಣಿ ಮಾಡಿಸಿಕೊಳ್ಳದೆ ಅನಧಿಕೃತವಾಗಿ ನಡೆಸುತ್ತಿದ್ದ ಭಾರದ್ವಾಜ್ ಕ್ಲಿನಿಕ್ ಅನ್ನು ಮುಚ್ಚಿಸಿದೆ.
ದಾಳಿ ವೇಳೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಕಳಿಸುವುದಾಗಿ ಟಿಎಚ್‌ಒ ರಾಮಚಂದ್ರಾರೆಡ್ಡಿ ತಿಳಿಸಿದ್ದಾರೆ. ಆರೋಗ್ಯ ನಿರೀಕ್ಷಕ ಶ್ರೀನಿವಾಸ ರೆಡ್ಡಿ ಮತ್ತಿತತರು ಇದ್ದರು.