ಕಾಶಿ ಜಗದ್ಗುರುಗಳ ಆಶೀರ್ವಾದ ಪಡೆದ ಸಂಸದ ಡಾ.ಉಮೇಶ ಜಾಧವ್

ಪರಮಪೂಜ್ಯ ಶ್ರೀಮದ್ ಕಾಶಿ ಜಗದ್ಗುರುಗಳಾದ ಡಾ. ಚಂದ್ರಶೇಖರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರನ್ನು ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಆಗಿರುವ ಡಾ.ಉಮೇಶ ಜಾಧವ ಭೇಟಿ ಮಾಡಿದರು.
IMG-20240415-WA0018
Published on

ಶಖಾಪುರ ಮಠದಲ್ಲಿ ಭೇಟಿ : ಆಂದೋಲಾ ಶ್ರೀ , ಶಖಾಪುರ ಶ್ರೀ ಇನ್ನಿತರ ಪೂಜ್ಯರ ಸಮ್ಮುಖದಲ್ಲಿ ಹರಸಿದ ಜಗದ್ಗುರುಗಳು

ಜೇವರ್ಗಿ: ಪರಮಪೂಜ್ಯ ಶ್ರೀಮದ್ ಕಾಶಿ ಜಗದ್ಗುರುಗಳಾದ ಡಾ. ಚಂದ್ರಶೇಖರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರನ್ನು ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಆಗಿರುವ ಸಂಸದರಾದ ಡಾ. ಉಮೇಶ್ ಜಾದವ್ ಅವರು ಶಾಖಾಪುರದ ತಪೋವನ ಮಠದಲ್ಲಿ ಶನಿವಾರ ಭೇಟಿಯಾಗಿ ಆಶೀರ್ವಾದ ಪಡೆದರು.
ಜಗದ್ಗುರುಗಳು ಸಂಸದರಿಗೆ ಪೇಟ ತೊಡಿಸಿ ಶಾಲು ಮತ್ತು ಹಾರದೊಂದಿಗೆ ಸನ್ಮಾನ ನೆರೆವೇರಿಸಿದ ನಂತರ ಆಶೀರ್ವದಿಸುತ್ತಾ ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಭಾರತವನ್ನು ವಿಶ್ವ ಗುರುವಾಗಿಸುವ ಸಂಕಲ್ಪ ತೊಟ್ಟು ಕೈಗೊಂಡ ಎಲ್ಲಾ ಕಾರ್ಯ ಯೋಜನೆಗಳು ಯಶಸ್ವಿಯಾಗಲಿ ನಾಡಿನ ಜನತೆಗೆ ಕಲ್ಯಾಣವಾಗಲಿ ಎಂದು ನುಡಿದರು. ಕಾಶಿ ಜಗದ್ಗುರುಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಜಾಧವ್ ಜಗದ್ಗುರುಗಳ ಆಶೀರ್ವಾದದಿಂದ ಭವಿಷ್ಯದ ಯೋಜನೆಗಳಿಗೆ ಮಹಾನ್ ಶಕ್ತಿ ಮತ್ತು ಪ್ರೇರಣೆ ಒದಗಿದಂತಾಗಿದೆ ಸನಾತನ ಹಿಂದೂ ಸಂಸ್ಕೃತಿಯನ್ನು ಕಾಪಾಡಲು ಮಠಮಾನ್ಯಗಳ ಮತ್ತು ಪೂಜ್ಯರ ಆಶೀರ್ವಾದ ಮತ್ತು ಶ್ರೀ ರಕ್ಷೆ ಜನಪ್ರತಿನಿಧಿಗಳ ಮೇಲೆ ಸದಾ ಇರಬೇಕು ಎಂದರು. ಈ ಸಂದರ್ಭದಲ್ಲಿ ಶಾಖಾಪುರ ತಪೋವನ ಮಠದ ಪೂಜ್ಯ ಶ್ರೀ ಷ. ಬ್ರ. ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ, ಆಂದೋಲ ಶ್ರೀ ಕರುಣೆಶ್ವರ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಉಪಸ್ಥಿತರಿದ್ದು ಲೋಕಸಭಾ ಸದಸ್ಯರನ್ನು ಹರಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net