

ಯಾದಗಿರಿ : 2024ರ ಜುಲೈ 16 ರಂದು ಜರುಗಿದ 2024-25ನೇ ಸಾಲಿನ ಮುಂಗಾರು ಹಂಗಾಮಿನ, ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿನ ತೀರ್ಮಾನದಂತೆ 2024ರ ಜುಲೈ 17 ರಿಂದಲೇ ಜೆ.ಬಿ.ಸಿ ವೃತ್ತ ಭೀಮರಾಯನಗುಡಿ ಕಛೇರಿ ಅಡಿಯಲ್ಲಿ ಬರುವ ಶಹಾಪೂರ ಶಾಖಾ ಕಾಲುವೆ, ಜೇವರ್ಗಿ ಶಾಖಾ ಕಾಲುವೆ ಮತ್ತು ಮುಡಬಾಳ ಶಾಖಾ ಕಾಲುವೆಯ ಕಾಲುವೆ ಜಾಲಗಳಿಗೆ ಸತತವಾಗಿ ನೀರನ್ನು ಹರಿಸಲಾಗುತ್ತಿದೆ ಎಂದು ಭೀಮರಾಯನಗುಡಿ ಜೆಬಿಸಿ ವೃತ್ತ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಅಧೀಕ್ಷಕ ಅಭಿಯಂತರರು ಲಕ್ಷö್ಮಣ ಎಂ.ನಾಯಕ ತಿಳಿಸಿದ್ದಾರೆ.
ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ಎಲ್ಲಾ ಕಾಲುವೆ ಜಾಲಗಳಿಗೆ 2024ರ ನವೆಂಬರ್ 13ರ ವರೆಗೆ ಮಾತ್ರ ಮುಂಗಾರು ಹಂಗಾಮಿಗೆ ನೀರು ಹರಿಸಲಾಗುವುದು. ಹಿಂಗಾರು ಹಂಗಾಮಿಗಾಗಿ ಮಾನ್ಯ ಅಧ್ಯಕ್ಷರು, ನೀರಾವರಿ ಸಲಹಾ ಸಮಿತಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಇವರ ಅಧ್ಯಕ್ಷತೆಯಲ್ಲಿ ಜರುಗಲಿರುವ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಕಾಲುವೆಗಳಲ್ಲಿ ನೀರು ಹರಿಸುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ರೈತ ಬಾಂಧವರ ಮಾಹಿತಿಗಾಗಿ ಪ್ರಕಟಿಸಿದೆ. ಈ ದಿಶೆಯಲ್ಲಿ ರೈತರು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ಸಹಕಾರ ನೀಡಲು ಕೋರಲಾಗಿದೆ. ಜೀವ ಜಲ ಅತೀ ಅಮೂಲ್ಯ ಅದನ್ನು ಪೋಲು ಮಾಡಬೇಡಿ ಹಿತವಾಗಿ ಮಿತವಾಗಿ ಬಳಸಿ ಎಂದು ತಿಳಿಸಿದ್ದಾರೆ.