ಉಕ್ಕಡಗಾತ್ರಿಯ ಅಜ್ಜಯ್ಯನ ಸನ್ನಿಧಿಯಲ್ಲಿ ಭಕ್ತ ಸಾಗರ

ukkadaatri
Published on

ಮಲೇಬೆನ್ನೂರು: ಸಮೀಪದ ಸುಕ್ಷೇತ್ರ ಉಕ್ಕಡಗಾತ್ರಿಯ ಶ್ರೀ ಕರಿಬಸವೇಶ್ವರ (ಅಜ್ಜಯ್ಯ)ನ ಸನ್ನಿಧಿಗೆ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸೋಮವಾರ ಭಕ್ತಸಾಗರವೇ ಹರಿದುಬಂದಿತು.

ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಭಕ್ತರು ಮೂಲ ಗದ್ದಿಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಜಲಾಭಿಷೇಕ ಸಲ್ಲಿಸಿದರು.

ಕರಿಬಸವೇಶ್ವರ ಸ್ವಾಮಿಗೆ ಮಾಡಿದ್ದ ಪುಷ್ಪಾಲಂಕಾರ ಗಮನ ಸೆಳೆಯಿತು. ನದಿಪಾತ್ರದಲ್ಲಿ ಟ್ರಸ್ಟ್ ವತಿಯಿಂದ ಬಿಗಿಭದ್ರತೆ ಒದಗಿಸಲಾಗಿತ್ತು. ದೇವಾಲಯ ಸಮಿತಿಯವರು ನದಿಗೆ ಇಳಿಯದಂತೆ ಮೈಕ್ ಮೂಲಕ ಮನವಿ ಮಾಡುತ್ತಿದ್ದುದು ಕಂಡುಬಂತು.

ಆದರೂ ಹೆಚ್ಚಿನ ಸಂಖ್ಯೆಯ ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಬಳಿಕ ಕರಿಬಸವೇಶ್ವರನ ದರ್ಶನ ಪಡೆದು ಹರಕೆ ಸಲ್ಲಿಸಿದರು. ಟ್ರಸ್ಟ್ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ನದಿ ದಂಡೆಯಲ್ಲಿ ಕಟ್ಟೆಚ್ಚರ
ನದಿ ದಂಡೆಯಲ್ಲಿ ಸ್ನಾನ ಮಾಡುವ ಭಕ್ತರಿಗೆ ಬ್ಯಾರಿಕೇಡ್ ಹಾಕಿ ಸೂಕ್ತ ಭದ್ರತೆಯನ್ನು ದೇವಸ್ಥಾನ ಸಮಿತಿ ಒದಗಿಸಿದ್ದರು. ಭಕ್ತರು ದಂಡೆಯಲ್ಲಿ ಭಕ್ತರು ದಂಡೆಯಲ್ಲಿ ಸ್ನಾನ ಮಾಡಿ ಅಜ್ಜಯ್ಯನ ದರ್ಶನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net