ಬ್ರಿಟಿಷ್​ ಹೈ ಕಮಿಷನರ್​ನಿಂದ ಯುಕೆ ರಾಷ್ಟ್ರೀಯ ದಿನಾಚರಣೆ

british
Published on

ಬೆಂಗಳೂರು: ವಿಶ್ವ ಪರಿಸರ ದಿನ ಅಂಗವಾಗಿ ಬ್ರಿಟಿಷ್​ ಹೈ ಕಮಿಷನರ್​, ನಗರದ ಸೈನ್ಸ್​ ಗ್ಯಾಲರಿಯಲ್ಲಿ ಯುಕೆ ರಾಷ್ಟ್ರೀಯ ದಿನ, ಕಿಂಗ್ಸ್​ ರ್ಬತ್​ ಡೇ ಪಾರ್ಟಿ ಆಯೋಜಿಸಿತ್ತು.

ಪರಿಸರ ದಿನದ ಪರಿಕಲ್ಪನೆ ಅಡಿ ನಡೆದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಬಣ್ಣದ ಆಟಿಕೆ, ರಟ್ಟು ಬಳಸಿ ಕಿಂಗ್​ ಚಾಲ್ಸ್​-3 ಭಾವಚಿತ್ರ ರಚಿಸಲಾಯಿತು. ಕರ್ನಾಟಕ ಮತ್ತು ಕೇರಳದ ಬ್ರಿಟಿಷ್​ ಡೆಫ್ಯೂಟಿ ಹೈ ಕಮಿಷನರ್​ ಚಂದ್ರು ಅಯ್ಯರ್​, ಪರಿಸರ ರಕ್ಷಣೆ, ಸುಸ್ಥಿರತೆಯ ಉಪಕ್ರಮಗಳ ಕುರಿತು ಮಾತನಾಡಿದರು.

ಯುಕೆ ಮತ್ತು ಕರ್ನಾಟಕ ನಡುವಿನ ಸಂಬಂಧ ಚೆನ್ನಾಗಿದೆ. ವ್ಯಾಪಾರ, ಹೂಡಿಕೆಗೆ ಉತ್ತೇಜಿಸಲು, ಶಿಕ್ಷಣ ಮತ್ತು ಸಾಂಸ್ಕೃತಿಕ ಪಾಲದಾರಿಕೆ ಮೂಲಕ ಪರಸ್ಪರ ಎರಡು ದೇಶಗಳು ಜನರೊಂದಿಗೆ ತೊಡಗಿಸಿಕೊಳ್ಳಲು ಅನುಕೂಲವಾಗಿದೆ ಎಂದು ಚಂದ್ರು ಅಯ್ಯರ್​ ಹೇಳಿದರು. ಶಾಸಕ ಡಾ.ಸಿ.ಎನ್​.ಅಶ್ವತ್ಥ ನಾರಾಯಣ ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net