ಹೊಸ ವರ್ಷಕ್ಕೆ ಭರ್ಜರಿ ಖರೀದಿ : ಯುಗಾದಿ ಹಬ್ಬದ ಸಂಭ್ರಮ

0804klb05
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ
ತೀವ್ರ ಬಿಸಿಲು, ಬರದ ಹೊಡೆತದ ಮಧ್ಯೆಯೂ ಜಿಲ್ಲೆಯಲ್ಲಿ ಹಿಂದುಗಳ ಹೊಸ ವರ್ಷ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಹಬ್ಬಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಮವಾರ ಯುಗಾದಿ ಅಮಾವಾಸ್ಯೆ ಆಚರಿಸಿದ್ದು, ಮಂಗಳವಾರ ಂiÀ ಹಬ್ಬದಾಚರಣೆ ನಡೆಯಲಿದೆ.
ಪ್ರಸ್ತುತ ಶಾಲೆ, ಕಾಲೇಜುಗಳು ರಜೆಯಲ್ಲಿದ್ದು, ಮಕ್ಕಳೊಂದಿಗೆ ಹಬ್ಬದಾಚರಣೆಗೆ ಮಾರುಕಟ್ಟೆಯಲ್ಲಿ ಖರೀದಿ ಜೋರು ನಡೆಯಿತು. ಹೊಸ ಬಟ್ಟೆ, ತಳ್ಳೀರು ತೋರಣಕ್ಕೆ ಮಾವಿನ ಎಲೆ, ಹೂವು, ಬೇವಿನ ಸೊಪ್ಪು, ವಿಶೇಷ ಖಾದ್ಯ ಬೇವಿಗೆ ಬೇಕಾಗುವ ಪದಾರ್ಥಗಳನ್ನು ಖರೀದಿ ಕಂಡು ಬಂತು.
ಮAಗಳವಾರ ಯುಗಾದಿ ಹಬ್ಬದಾಚರಣೆ ನಡೆಯಲಿದ್ದು, ಬೆಳಗ್ಗೆಯಿಂದಲೇ ವಿಶೇಷ ಅಭ್ಯಂಜನ ಮಾಡಿ, ದೇವರಿಗೆ ಪೂಜೆ, ನೈವೇದ್ಯ ಅರ್ಪಿಸಿ ಬೇವು ಮಾಡಿ ಸೇವಿಸಲಾಗುತ್ತದೆ. ಬಹುತೇಕರ ಮನೆಯಲ್ಲಿ ಯುಗಾದಿ ನಿಮಿತ್ತ ಹೊಸ ಪಂಚಾಗಕ್ಕೆ ಪೂಜೆ ಮಾಡಿ, ಪಠಣ ಮಾಡಲಾಗುತ್ತದೆ.


ಏನಿದು ಯುಗಾದಿ ಬೇವು
ಕಲಬುರಗಿ ಜಿಲ್ಲೆಯಲ್ಲಿ ಯುಗಾದಿ ನಿಮಿತ್ತ ವಿಶೇಷವಾಗಿ ಬೇವು ಪಾನಕ ಸಿದ್ಧಪಡಿಸಿ ಸೇವಿಸುವುದು ವಾಡಿಕೆ. ಬೇವಿನ ಹೂವಿನ ಪಕಳೆಗಳು, ಬೆಲ್ಲ, ಕೊಬ್ಬರಿ, ಮಾವಿನಕಾಯಿ, ಕಲ್ಲು ಸಕ್ಕರೆ, ಒಣದ್ರಾಕ್ಷಿ, ದ್ರಾಕ್ಷಿ ಸೇರಿ ಇತರ ಪದಾರ್ಥಗಳನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಹೊಸದಾಗಿ ಖರೀದಿಸಿದ ಮಣ್ಣಿನ ಮಡಿಕೆಯಲ್ಲಿಟ್ಟು ಇಡೀ ದಿನ ಸೇವಿಸುವುದು, ಇತರರೊಂದಿಗೆ ಹಂಚಿಕೊಳ್ಳುವುದು ಈ ಹಬ್ಬದ ವಿಶೇಷ. ಬೇವು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಸಹಕಾರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net