ಉದ್ಯೋಗ ಮೇಳದಿಂದ ಗ್ರಾಮೀಣ ಮಕ್ಕಳಿಗೆ ಉಪಯೋಗ

ಉದ್ಯೋಗ ಮೇಳದಿಂದ ಗ್ರಾಮೀಣ ಮಕ್ಕಳಿಗೆ ಉಪಯೋಗ
Published on

ವಿರಾಜಪೇಟೆ: ವಿರಾಜಪೇಟೆ ಗೋಣಿಕೊಪ್ಪ ರಸ್ತೆಯ ಶಾನ್‌ಬೋಗ್ ಕಟ್ಟಡದಲ್ಲಿರುವ ಎ-ಟೆಕ್ ಎಜುಕೇಶನಲ್ ಸೆಂಟರ್ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಶಂಕರಾಚಾರ್ಯ ಟ್ರಸ್ಟ್ ಹಾಗೂ ಮೈಸೂರಿನ ನೈಸ್ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಉದ್ಯೋಗ ಮೇಳ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಪುರಸಭೆ ಸದಸ್ಯ ಎಸ್.ಎಚ್. ಮತೀನ್ ಗ್ರಾಮೀಣ ಮಕ್ಕಳಿಗೆ ಉದ್ಯೋಗವಕಾಶಗಳು ದೊರಕಲು ಇಂತಹ ಕಾರ್ಯಕ್ರಮ ಆಯೋಜನೆ ಸಹಕಾರಿಯಾಗಿದೆ. ಮೇಳದ ಲಾಭವನ್ನು ಯುವಜನತೆ ಪಡೆದುಕೊಳ್ಳುವಂತಾಗಲಿ ಎಂದರು.

ಪುರಸಭೆ ಮಾಜಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಎ-ಟೆಕ್ ಎಜುಕೇಶನಲ್ ಸಂಸ್ಥೆಯ ಪ್ರಮುಖ ಶಫೀರ್, ಖಮರುದ್ದಿನ್ ಮಾತನಾಡಿದರು.

ಸಿದ್ದಿಖ್ ಹಂಸ, ಸೋನಾ ಅನನ್‌ಶವ, ಸಾಬೀರ ಇತರರು ಇದ್ದರು.

ಎ-ಟೆಕ್ ಎಜುಕೇಶನಲ್ ಸೆಂಟರ್ ವತಿಯಿಂದ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ವಿವಿಧ ಭಾಗದಿಂದ ಪಾಲ್ಗೊಂಡಿದ್ದ ಉದ್ಯೋಗಾಂಕ್ಷಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net